ಭಾರತೀಯ ಯುವಕರಿಗೆ ಉದ್ಯೋಗ ಬೇಕಾಗಿದೆ, ಕಣ್ಗಾವಲು ಪಡೆಗಳಲ್ಲ: ಯೆಚೂರಿ
ದೊಡ್ಡ ಉದ್ದಿಮೆದಾರರಿಗೆ ವಿನಾಯಿತಿ ನೀಡುವುದರ ವಿರುದ್ಧ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿರುಸಿವ ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಭಾರತೀಯ ಯುವಕರಿಗೆ ಬೇಕಾಗಿರುವುದು
ನವದೆಹಲಿ: ದೊಡ್ಡ ಉದ್ದಿಮೆದಾರರಿಗೆ ವಿನಾಯಿತಿ ನೀಡುವುದರ ವಿರುದ್ಧ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಿರುಸಿವ ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಭಾರತೀಯ ಯುವಕರಿಗೆ ಬೇಕಾಗಿರುವುದು ಉದ್ಯೋಗಗಳು, ಕಣ್ಗಾವಲು ಪಡೆಗಳಲ್ಲ ಎಂದು ಕೂಡ ಹೇಳಿದ್ದಾರೆ.
"ದೇಶದ ಮೂರನೇ ಎರಡು ಭಾಗ ಯುವಕರು. ಅವರಿಗೆ ಉದ್ಯೋಗಗಳು ಬೇಕಾಗಿದೆ. ಗೋರಕ್ಷಣೆ ಹೆಸರಲ್ಲಿ ಅಥವಾ ಆಂಟಿ ರೋಮಿಯೋ ಪಡೆಗಳ ಹೆಸರಿನಲ್ಲಿ ಅವರನ್ನು ವಿಚಲಿಸುವುದಲ್ಲ" ಎಂದು ಫೇಸ್ಬುಕ್ ನಲ್ಲಿ ಸಿಪಿಐ ಮುಖಂಡ ವಿಡಿಯೋ ಸಂದೇಶವನ್ನು ಹರಿದುಬಿಟ್ಟಿದ್ದಾರೆ.
"ಗೋರಕ್ಷಣೆ ಮುಂತಾದುವುಗಳ ಹೆಸರಿನಲ್ಲಿ ದೇಶದ ಯುವಜನತೆಯನ್ನು ವಿಚಲಿಸುವ ಇಂತಹ ಪಿತೂರಿಗಳನ್ನು ಸೋಲಿಸುವ ಅವಶ್ಯಕತೆ ಇದೆ" ಎಂದು ಕೂಡ ಯೆಚೂರಿ ಹೇಳಿದ್ದಾರೆ.
ದೊಡ್ಡ ಕಾರ್ಪೊರೇಟ್ ಗಳು ನೀಡಬೇಕಿರುವ ಸುಮಾರು ೧೧ ಲಕ್ಷ ಕೋಟಿ ರೂಗಳನ್ನು ಹಿಂದಕ್ಕೆ ಪಡೆದರೆ, ಮತ್ತು ಅವುಗಳಿಗೆ ತೆರಿಗೆ ವಿನಾಯಿತಿಯನ್ನು ನೀಡಲು ನಿಲ್ಲಿಸಿದರೆ ಅದನ್ನು ಅಭಿವೃದ್ಧಿ ಮೂಲಸೌಕರ್ಯ ಸೃಷ್ಟಿಸಲು ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲು ವಿನಿಯೋಗಿಸಬಹುದು ಎಂದು ಕೂಡ ಅವರು ಹೇಳಿದ್ದಾರೆ.
"ನಮಗೆ ಅಂತಹ ನೀತಿಗಳು ಬೇಕಾಗಿವೆ. ಧಾರ್ಮಿಕ ಮತ್ತು ಕೋಮು ಭಾವನೆ ಜೊತೆಗೆ ಆಟ ಆಡುವ ಯೋಜನೆಗಳಲ್ಲ" ಎಂದು ಕೂಡ ಯೆಚೂರಿ ಹೇಳಿದ್ದಾರೆ.