ಘರ್ ವಾಪ್ಸಿ: ಹಿಂದೂ ಧರ್ಮಕ್ಕೆ ಮರಳಿದ 53 ಕುಟುಂಬಗಳು

ಆರ್ ಎಸ್ ಎಸ್ ನ ಆಯೋಜಿಸಿದ್ದ ಕ್ರಿಶ್ಚಿಯಾನಿಟಿ ಫ್ರೀ ಶಿಬಿರದಿಂದಾಗಿ ಜಾರ್ಖಂಡ್ ನ 53 ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿವೆ...
ಆರ್ ಎಸ್ ಎಸ್ ಪಥ ಸಂಚಲನ
ಆರ್ ಎಸ್ ಎಸ್ ಪಥ ಸಂಚಲನ
ಖುಂಟಿ: ಆರ್ ಎಸ್ ಎಸ್ ನ ಆಯೋಜಿಸಿದ್ದ ಕ್ರಿಶ್ಚಿಯಾನಿಟಿ ಫ್ರೀ  ಶಿಬಿರದಿಂದಾಗಿ  ಜಾರ್ಖಂಡ್ ನ 53 ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿವೆ. 
ಕ್ರೈಸ್ತ ಮಿಷನರಿಗಳಡೆಗೆ ಆಕರ್ಷಿತರಾಗಿ ಬುಡಕಟ್ಟು ಜನಾಂಗದವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂದು ಖುಂಟಿ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ್ ಸಿಂಗ್ ಮುಂಡಾ ಹೇಳಿದ್ದಾರೆ.
ಇದು ಮತಾಂತರವಲ್ಲಿ, ಅವರು ವಾಪಸ್ ತಮ್ಮ ಧರ್ಮಕ್ಕೆ ಮರಳಿದ್ದಾರೆ ಎಂದು ಆರ್ ಎಸ್ ಎಸ್ ಸ್ಪಷ್ಟನೆ ನೀಡಿದೆ. ನಮಗೆ ಕ್ರಿಶ್ಚಿಯಾನಿಟಿ ಮುಕ್ತ ಪ್ರದೇಶ ಬೇಕು. ಗ್ರಾಮಸ್ಥರು ತಮ್ಮ ಮೂಲಕ್ಕೆ ಶೀಘ್ರವೇ ವಾಪಸಾಗುತ್ತಾರೆ ಎಂದು ಆರ್ ಎಸ್ ಎಸ್ ಸಂಯೋಜಕ ಲಕ್ಷ್ಮಣ್ ಸಿಂಗ್ ಮುಂಡಾ ತಿಳಿಸಿದ್ದಾರೆ. 
ಕಳೆದ ಕೆಲ ವರ್ಷಗಳಿಂದ ಜಾರ್ಖಂಡ್ ನ ಹಲವು ಬುಡಕಟ್ಟು ಜನಾಂಗಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿವೆ, ಬಲವಂತವಾಗಿ  ಮತಾಂತರ ಮಾಡುವವರ ವಿರುದ್ಧ , ಜಾರ್ಖಂಡ್ ಸಿಎಂ ರಘುಬರ್ ದಾಸ್ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com