ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಇನ್ಮುಂದೆ ಆಹಾರ ವ್ಯರ್ಥ ಮಾಡುವಂತಿಲ್ಲ!

ದೇಶದಲ್ಲಿ ಲಕ್ಷಾಂತರ ಮಂದಿ ಹಸಿವಿನಿಂದ ಸಾವನ್ನಪ್ಪುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ರೆಸ್ಟೋರೆಂಟ್ ​ಮತ್ತು ಹೋಟೆಲ್ ಗಳಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಲಕ್ಷಾಂತರ ಮಂದಿ ಹಸಿವಿನಿಂದ ಸಾವನ್ನಪ್ಪುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ರೆಸ್ಟೋರೆಂಟ್​ಮತ್ತು ಹೋಟೆಲ್ ಗಳಲ್ಲಿ ವ್ಯರ್ಥಗೊಳ್ಳುತ್ತಿರುವ ಸಾಕಷ್ಟು ಆಹಾರಕ್ಕೆ ತಡೆಯೊಡ್ಡಲು ಮುಂದಾಗಿದೆ. 
ರೆಸ್ಟೋರೆಂಟ್​ಗಳಲ್ಲಿ ವಿಪರೀತವಾಗಿ ಆಹಾರ ವ್ಯರ್ಥಗೊಳ್ಳುವುದನ್ನು ತಡೆಯಲು ಒಬ್ಬ ವ್ಯಕ್ತಿಗೆ ಎಷ್ಟು ಆಹಾರ ಪೂರೈಸಬೇಕು ಎಂಬ ನಿಯಮ ಸೃಷ್ಟಿಸಲು ಕೇಂದ್ರ ಮುಂದಾಗಿದೆ ಎನ್ನಲಾಗಿದೆ. ಈ ಕುರಿತು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವನ್ ಖಾಸಗಿ ಚಾನೆಲ್ ಒಂದರ ಸಂದರ್ಶನದಲ್ಲಿ  ಹೇಳಿದ್ದಾರೆ. 
ನಮ್ಮ ದೇಶದಲ್ಲಿ ಸಾಕಷ್ಟು ಮಂದಿ ಹಸಿವಿನಿಂದ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೆಸ್ಟೋರೆಂಟ್​ಗಳಲ್ಲಿ ಆಹಾರ ವ್ಯರ್ಥಗೊಳಿಸುತ್ತಿರುವುದು ಗಂಭೀರ ವಿಚಾರ. ಒಬ್ಬ ವ್ಯಕ್ತಿಗೆ ಇಂತಿಷ್ಟು ಆಹಾರ ನೀಡಬೇಕು ಎಂಬ ಕುರಿತು ನಿಯಮ ರೂಪಿಸಲು ಸಾಧ್ಯವೇ ಎಂಬ ಕುರಿತು ಚರ್ಚೆ ನಡೆಸಲು ಶೀಘ್ರದಲ್ಲೇ ಕಂಪನಿ, ರೆಸ್ಟೋರೆಂಟ್ ಮತ್ತು ಹೋಟೆಲ್ ಉದ್ದಿಮೆಗಳ ಮಾಲಿಕರನ್ನು ಸಭೆಗೆ ಕರೆಯಲಿದ್ದೇವೆ ಎಂದು ಪಾಸ್ವಾನ್ ತಿಳಿಸಿದ್ದಾರೆ.
ಡಾಬಾ ಮತ್ತು ಸ್ಟ್ಯಾಂಡರ್ಡ್ ಹೋಟೆಲ್ ಗಳಿಗೂ ಕೂಡ ಈ ನಿಯಮ ಅನ್ವಯವಾಗಲಿದೆ ಎಂದು ಪಾಸ್ವಾನ್ ತಿಳಿಸಿದ್ದಾರೆ. ಕಳೆದ ತಿಂಗಳ ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ವ್ಯರ್ಥವಾಗುತ್ತಿರುವ ಆಹಾರದ ಕಾಳಜಿ ವ್ಯಕ್ತ ಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com