ದೆಹಲಿ ನಗರಸಭಾ ಚುನಾವಣೆಗಳ ನಂತರ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮೇಕನ್ ಬಿಜೆಪಿ ಪಕ್ಷ ಸೇರುವ ಸುದ್ದಿಯಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಮತ ವ್ಯರ್ಥಮಾಡಬೇಡಿ ಎಂದು ದೆಹಲಿ
ನವದೆಹಲಿ: ದೆಹಲಿ ನಗರಸಭಾ ಚುನಾವಣೆಗಳ ನಂತರ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮೇಕನ್ ಬಿಜೆಪಿ ಪಕ್ಷ ಸೇರುವ ಸುದ್ದಿಯಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಮತ ವ್ಯರ್ಥಮಾಡಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
ಏಪ್ರಿಲ್ ೨೩ ರ ಮುನ್ಸಿಪಲ್ ಚುನಾವಣೆಗಳ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಜ್ರಿವಾಲ್, ರಾಷ್ಟ್ರದ ರಾಜಧಾನಿಯಲ್ಲಿ ಕಾಂಗ್ರೆಸ್ ಪಕ್ಷ ಮುಗಿದಿದೆ ಎಂದಿದ್ದಾರೆ.
"ಕಾಂಗ್ರೆಸ್ ನ ದೊಡ್ಡ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ. ಅಜಯ್ ಮೇಕನ್ ಅಮಿತ್ ಶಾ ಜೊತೆಗೆ ಮಾತುಕತೆ ನಡೆಸಿದ್ದಾರೆ ಮತ್ತು ಮುನ್ಸಿಪಲ್ ಚುನಾವಣೆಗಳ ನಂತರ ಬಿಜೆಪಿ ಸೇರಲಿದ್ದಾರೆ ಎಂದು ನನಗೆ ತಿಳಿದುಬಂದಿದೆ" ಎಂದು ಕೂಡ ಎಎಪಿ ಮುಖಂಡ ಹೇಳಿದ್ದಾರೆ.
ಮಂಗಳವಾರ ದೆಹಲಿಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ವಿಂದರ್ ಸಿಂಗ್ ಲವ್ಲಿ ಭಾರತೀಯ ಜನತಾ ಪಕ್ಷ ಸೇರಿದ್ದರು.
ಬಿಜೆಪಿ ಪಕ್ಷಕ್ಕೂ ಮತ ಹಾಕದಂತೆ ನಾಗರಿಕರಿಗೆ ಮನವಿ ಮಾಡಿರುವ ಕೇಜ್ರಿವಾಲ್ "ಕಳೆದ ೧೦ ವರ್ಷಗಳಲ್ಲಿ ದೆಹಲಿಯನ್ನು ಸ್ವಚ್ಛಗೊಳಿಸಲು ಬಿಜೆಪಿ ಸೋತಿದೆ. ಈಗ ಮತ್ತೇನು ವಿಭಿನ್ನವಾಗಿ ಮಾಡಬಲ್ಲರು" ಎಂದು ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.