ಜಲ್ಲಿಕಟ್ಟು ಗೂಳಿಯ ಹೊಟ್ಟೆಯಲ್ಲಿತ್ತು 40 ಕೆಜಿ ಪ್ಲಾಸ್ಟಿಕ್ ಮತ್ತು ಎಲ್ ಇ ಡಿ ಬಲ್ಬು!

ತಮಿಳುನಾಡಿನ ಜಲ್ಲಿಕಟ್ಟು ಗೂಳಿ ಕ್ರೀಡೆಯನ್ನು ಪ್ರತಿನಿಧಿಸಿದ್ದ ಗೂಳಿಯ ಹೊಟ್ಟೆಯಿಂದ ಪಶುವೈದ್ಯರು ೩೮.೫ ಕೆಜಿ ಪ್ಲಾಸ್ಟಿಕ್ ಚೀಲಗಳು ಮತ್ತು ಎಲ್ ಇ ಡಿ ಬಲ್ಬ್ ಒಂದನ್ನು ಹೊರತೆಗೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತಂಜಾವೂರು: ತಮಿಳುನಾಡಿನ ಜಲ್ಲಿಕಟ್ಟು ಗೂಳಿ ಕ್ರೀಡೆಯನ್ನು ಪ್ರತಿನಿಧಿಸಿದ್ದ ಗೂಳಿಯ ಹೊಟ್ಟೆಯಿಂದ ಪಶುವೈದ್ಯರು ೩೮.೫ ಕೆಜಿ ಪ್ಲಾಸ್ಟಿಕ್ ಚೀಲಗಳು ಮತ್ತು ಎಲ್ ಇ ಡಿ ಬಲ್ಬ್ ಒಂದನ್ನು ಹೊರತೆಗೆದಿದ್ದಾರೆ. 
ಅನಾರೋಗ್ಯದಿಂದ ಬಳಲುತ್ತಿದ್ದ ಈ ಗೂಳಿಯನ್ನು ನೆನ್ನೆ ತಿರುಚಿರಪ್ಪಲ್ಲಿಯ ಪಶು ವೈದ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಅದರ ಮಾಲೀಕ ಅಯ್ಯಪ್ಪನ್ ಕರೆತಂದಿದ್ದರು. 
ತಪಾಸಣೆ ನಡೆಸಿದ ಪಶುವೈದ್ಯರು, ಈ ಗೂಳಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. 
ಶಸ್ತ್ರಚಿಕಿತ್ಸೆಯ ನಂತರ ಗೂಳಿಯ ಹೊಟ್ಟೆಯಿಂದ ೩೮.೪ ಕೆಜಿ ಪ್ಲಾಸ್ಟಿಕ್ ಬ್ಯಾಗ್ ಗಳು, ಒಂದು ಎಲ್ ಇ ಡಿ ಬಲ್ಬು, ಪಿನ್ ಗಳು, ಮೊಳೆಗಳು, ಹಗ್ಗಗಳನ್ನು ವೈದ್ಯರು ಹೊರತೆಗೆದಿದ್ದಾರೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com