ಕಾಶ್ಮೀರ: ಜಾನುವಾರು ಸಾಕಾಣೆ ಅಲೆಮಾರಿ ಕುಟುಂಬದ ಮೇಲೆ ದಾಳಿ; ನಾಲ್ವರು ಗೋರಕ್ಷಕರ ವಿರುದ್ಧ ಪ್ರಕರಣ

ಜಾನುವಾರುಗಳನ್ನು ಸಾಕುವ ಅಲೆಮಾರಿ ಕುಟುಂಬದ ಮೇಲೆ ದಾಳಿ ಮಾಡಿದ ನಾಲ್ಕು ಸದಸ್ಯರ ಸ್ವಯಂಘೋಷಿತ ಗೋರಕ್ಷಕರ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ರೆಸಾಯಿ ಜಿಲ್ಲೆಯಲ್ಲಿ ಪೊಲೀಸರು ಶನಿವಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜಮ್ಮು: ಜಾನುವಾರುಗಳನ್ನು ಸಾಕುವ ಅಲೆಮಾರಿ ಕುಟುಂಬದ ಮೇಲೆ ದಾಳಿ ಮಾಡಿದ ನಾಲ್ಕು ಸದಸ್ಯರ ಸ್ವಯಂಘೋಷಿತ ಗೋರಕ್ಷಕರ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ರೆಸಾಯಿ ಜಿಲ್ಲೆಯಲ್ಲಿ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಒಂಭತ್ತು ವರ್ಷದ ಬಾಲಕಿಯನ್ನು ಸೇರಿದಂತೆ, ಗುರುವಾರ ರಾತ್ರಿ ನಡೆದ ಈ ದಾಳಿಯಲ್ಲಿ ಕುಟುಂಬದ ಐವರು ಸದಸ್ಯರಿಗೂ ಗಾಯಗಳಾಗಿವೆ. ಜಾನುವಾರುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸುವಾಗ ತಲ್ವಾರ ಪ್ರದೇಶದಲ್ಲಿ ಈ ದಾಳಿ ನಡೆದಿದೆ. 
"ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ. ಏಪ್ರಿಲ್ ೨೦ರ ರಾತ್ರಿ, ದನಕರು, ಮೇಕೆ ಮತ್ತು ಕುರಿಗಳನ್ನು ಒಳಗೊಂಡಂತೆ ಜಾನುವಾರುಗಳನ್ನು ಸ್ಥಳಾಂತರಿಸುವಾಗ ಅಲೆಮಾರಿ ಕುಟುಂಬದ ಮೇಲೆ ದಾಳಿ ಮಾಡಿದ ಈ ವ್ಯಕ್ತಿಗಳನ್ನು ಬಂಧಿಸಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
ಎಲ್ಲ ಜಾನುವಾರುಗಳನ್ನು ಮಾಲೀಕರಿಗೆ ನೀಡಲಾಗಿದೆ ಎಂದು ಕೂಡ ಪೋಲಿ ಅಧಿಕಾರಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com