ಯೋಗಿ ಆದಿತ್ಯನಾಥ್
ಪ್ರಧಾನ ಸುದ್ದಿ
ಗಾಯತ್ರಿ ಪ್ರಜಾಪತಿ ಕುಟುಂಬಸ್ಥರ ಭೇಟಿ ನಿರಾಕರಿಸಿದ ಯೋಗಿ ಆದಿತ್ಯನಾಥ್
ಅತ್ಯಾಚಾರ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಕುಟುಂಬಸ್ಥರನ್ನು ಭೇಟಿ ಮಾಡಲು ಯೋಗಿ ಆದಿತ್ಯನಾಥ್ ..
ಲಕ್ನೋ: ಅತ್ಯಾಚಾರ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಕುಟುಂಬಸ್ಥರನ್ನು ಭೇಟಿ ಮಾಡಲು ಯೋಗಿ ಆದಿತ್ಯನಾಥ್ ನಿರಾಕರಿಸಿದ್ದಾರೆ.
ಗಾಯತ್ರಿ ಪ್ರಜಾಪತಿ ಪತ್ನಿ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಲು, ಕಾಳಿದಾಸ್ ಮಾರ್ಗ್ -5 ನಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ್ದರು ಎಂದು ಸಮಾಜವಾದಿ ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.
ನಾವು ಸಿಎಂ ಅವರನ್ನು ಭೇಟಿ ಮಾಡಲು ಬಂದಿದ್ದೆವು, ಆದರೆ ಅವರು ನಮ್ಮನ್ನು ಭೇಟಿ ಮಾಡಲಿಲ್ಲ. ಯೋಗಿ ಆದಿತ್ಯನಾಥ್ ತಮ್ಮ ನಿವಾಸದಲ್ಲಿ ನಡೆಯುತ್ತಿದ್ದ ಜನತಾ ದರ್ಬಾರ್ ನಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುತ್ತಿದ್ದರು. ಸ್ಥಳದಲ್ಲಿದ್ದ ಸಚಿವರೊಬ್ಬರು ನಮ್ಮ ಸಮಸ್ಯೆ ಆಲಿಸುವುದಾಗಿ ಹೇಳಿದರು ಎಂದು ಪ್ರಜಾಪತಿ ಪತ್ನಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ನನ್ನ ಪತಿಗೆ ನ್ಯಾಯ ಸಿಗುವುದೆಂಬ ನಂಬಿಕೆ ನನಗಿದೆ, ಮತ್ತೊಮ್ಮೆ ನಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇವೆ ಎಂದು ಆಕೆ ತಿಳಿಸಿದ್ದಾರೆ. ಇನ್ನೂ ಈ ವೇಳೆ ಮಾತನಾಡಿದ ಪ್ರಜಾಪತಿ ಪುತ್ರಿ ನನ್ನ ತಂದೆಯನ್ನು ಪ್ರಕರಣದಲ್ಲಿ ಎಳೆ ತರಲಾಗಿದೆ, ಅವರು ಮುಗ್ಧರು ನಮಗೆ ನ್ಯಾಯ ಬೇಕು, ಸಿಎಂ ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸುತ್ತಾರೆಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.

