ಆರೋಗ್ಯ ಸಚಿವರ ತವರು ಜಿಲ್ಲಾಸ್ಪತ್ರೆಯಲ್ಲಿ 3 ನವಜಾತ ಶಿಶುಗಳ ದಾರುಣ ಸಾವು

ಗೋರಖ್ ಪುರ ದುರಂತ ಇನ್ನೂ ಹಸಿಯಾಗಿರುವಾಗಲೇ ಕೋಲಾರದ ಎಸ್ ಆರ್ ಎನ್ ಆಸ್ಪತ್ರೆಯಲ್ಲಿ ಮೂರು ನವಜಾತ ಶಿಶುಗಳು ...
ರಮೇಶ್ ಕುಮಾರ್
ರಮೇಶ್ ಕುಮಾರ್
ಕೋಲಾರ: ಗೋರಖ್ ಪುರ ದುರಂತ ಇನ್ನೂ ಹಸಿಯಾಗಿರುವಾಗಲೇ ಕೋಲಾರದ ಎಸ್ ಆರ್ ಎನ್ ಆಸ್ಪತ್ರೆಯಲ್ಲಿ ಮೂರು ನವಜಾತ ಶಿಶುಗಳು ಕೊನೆಯಸಿರೆಳೆದಿದ್ದು ಗರ್ಭಿಣಿಯರು ಆತಂಕದಲ್ಲಿದ್ದಾರೆ.
ಆದರೆ ಎರಡು ಮಕ್ಕಳು ಹುಟ್ಟುವಾಗ ಅತಿ ಕಡಿಮೆ ತೂಕ ಹೊಂದಿದ್ದವು ಮತ್ತೊಂದು ಮಗು ಜನನ ಕಾಲದ ವೈಪರೀತ್ಯದಿಂದ ಸಾವನ್ನಪ್ಪಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ, ಆದರೆ ಈ ಸಂಬಂಧ 24 ಗಂಟೆಗಳಲ್ಲಿ ಪೂರ್ಣ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಕೆ.ವಿ ತ್ರಿಲೋಕ್ ಚಂದ್ರ ಜಿಲ್ಲಾ ಸರ್ಜನ್ ಗೆ ಸೂಚಿಸಿದ್ದಾರೆ.
ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಅಥವಾ ನಿರ್ಲಕ್ಷ್ಯದಿಂದ ಮಕ್ಕಳು ಸಾವನ್ನಪ್ಪಿಲ್ಲ,  ಒಂದು ಮಗು ಮಿದುಳಿನ ಅಸಹಜ ಬೆಳವಣಿಗೆಯಿಂದ ಸಾವನ್ನಪ್ಪಿದೆ. ಮತ್ತೊಂದು ಪ್ರಕರಣದಲ್ಲಿ ತಾಯಿಯೊಬ್ಬಳು, ಮೂವರು ಮಕ್ಕಳಿಗೆ ಜನ್ಮವಿತ್ತಿದ್ದರು, ಅದರಲ್ಲಿ ಒಂದು ಮಗುವಿನ ತೂಕ ತುಂಬಾ ಕಡಿಮೆಯಿತ್ತು.ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು, ಹೀಗಾಗಿ ಮಗುವನ್ನು ಚಿಂತಾಮಣಿಯ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು ಎಂಗು ಜಿಲ್ಲಾ ಆರೋಗ್ಯಾಧಿಕಾರಿ ವಿಜಯ್ ಕುಮಾರ್ ಹೇಳಿದ್ದಾರೆ.
ಮಕ್ಕಳನ್ನು ರಕ್ಷಿಸಲು ವೈದ್ಯರು ತುಂಬಾ ಪ್ರಯತ್ನ ಪಟ್ಟರು ಎಂದು ಡಾ. ಶಿವಕುಮಾರ್ ಹೇಳಿದ್ದಾರೆ. ಇನ್ನೂ ಕಳೆದ 30 ದಿನಗಳಲ್ಲಿ 30 ಮಕ್ಕಳು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿವೆ ಎಂಬ ಆರೋಪವನ್ನು ತ್ರಿಲೋಕ ಚಂದ್ರ ನಿರಾಕರಿಸಿದ್ದಾರೆ. 
ಪ್ರತಿ ತಿಂಗಳು ಈ ಆಸ್ಪತ್ರೆಯಲ್ಲಿ 350 ಹೆರಿಗೆಗಳಾಗುತ್ತವೆ. ಈ ಸಂಬಂಧ ತನಿಖೆಗೆ ನಡೆಸಲಾಗುವುದು ಎಂದು ಹೇಳಿದ್ದಾರೆ, ಇನ್ನೂ ಮಕ್ಕಳ ಸಾವಿನ ಸಂಬಂಧ ಸಿಎಂ ಸಿದ್ದರಾಮಯ್ಯ ವರದಿ ಕೋರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com