ಮಧುಸೂದನನ್ ಅವರು ಇಂದು ಬೆಳಗ್ಗೆ ಚೆನ್ನೈನ ಗ್ರೀನ್ ವೇಸ್ ನಲ್ಲಿರುವ ಓ ಪನ್ನೀರ್ ಸೆಲ್ವಂ ಅವರ ನಿವಾಸಕ್ಕೆ ಭೇಟಿ ನೀಡಿ, ಬೆಂಬಲ ನೀಡಿದ್ದಾರೆ. ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧುಸೂದನನ್ ಅವರು, ಪಕ್ಷವನ್ನು ಗೂಂಡಾಗಳಿಂದ ರಕ್ಷಿಸಬೇಕಿದೆ. ಶಶಿಕಲಾ ಅವರು ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ಜಯಲಲಿತಾ ಅವರಿಗೆ ಮಾತು ಕೊಟ್ಟಿದ್ದಾರೆ. ಆದರೆ ಅವರ ನಿಧನದ ನಂತರ ಅಧಿಕಾರಕ್ಕಾಗಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ವಿರುದ್ಧ ವಾಗ್ದಾಳಿ ನಡೆಸಿದರು.