ಅತಿ ದೊಡ್ಡ ಜಮೆ; ತೆರಿಗೆ ಇಲಾಖೆಯ ನೋಟಿಸ್ ಗೆ ಉತ್ತರಿಸಿದ ೫.೨೭ ಲಕ್ಷ ತೆರಿಗೆದಾರರು

ಬ್ಯಾಂಕ್ ಗಳಲ್ಲಿ ಅತಿ ದೊಡ್ಡ ಮೊತ್ತ ಜಮಾ ಮಾಡಿರುವ ಸುಮಾರು ೫.೨೭ ಲಕ್ಷಕ್ಕೂ ಹೆಚ್ಚು ಜನ ತೆರಿಗೆ ಇಲಾಖೆಯ ನೋಟಿಸ್ ಗೆ ಉತ್ತರಿಸಿದ್ದಾರೆ ಸುಮಾರು ೪.೮೪ ಲಕ್ಷ ತೆರಿಗೆದಾರರು 'ಆಪರೇಷನ್ ಕ್ಲೀನ್ ಮನಿ'
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಬ್ಯಾಂಕ್ ಗಳಲ್ಲಿ ಅತಿ ದೊಡ್ಡ ಮೊತ್ತ ಜಮಾ ಮಾಡಿರುವ ಸುಮಾರು ೫.೨೭ ಲಕ್ಷಕ್ಕೂ ಹೆಚ್ಚು ಜನ ತೆರಿಗೆ ಇಲಾಖೆಯ ನೋಟಿಸ್ ಗೆ ಉತ್ತರಿಸಿದ್ದಾರೆ ಸುಮಾರು ೪.೮೪ ಲಕ್ಷ ತೆರಿಗೆದಾರರು 'ಆಪರೇಷನ್ ಕ್ಲೀನ್ ಮನಿ' ಅಡಿಯಲ್ಲಿ ಇನ್ನು ಅಂತರ್ಜಾಲದಲ್ಲಿ ನೊಂದಾಯಿಸಿಕೊಳ್ಳಬೇಕಿದೆ ಎಂದು ಸೋಮವಾರ ಅಧಿಕೃತ ಹೇಳಿಕೆ ತಿಳಿಸಿದೆ. 
"ಫೆಬ್ರವರಿ ೧೨ ರವರೆಗೆ ಭಾರಿ ಪ್ರತಿಕ್ರಿಯೆ ಬಂದಿದ್ದು ೫.೨೭ ಲಕ್ಷ ತೆರಿಗೆದಾರರು ಉತ್ತರ ನೀಡಿದ್ದಾರೆ" ಎಂದು ಹಣಕಾಸು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. 
ನವೆಂಬರ್ ೯ ರಿಂದ ಜನವರಿ ೩೦ ೨೦೧೬ ರೊಳಗೆ ಮಾಡಲಾಗಿರುವ ಅತಿ ದೊಡ್ಡ ನಗದು ಜಮಾಗಳ ಬಗ್ಗೆ ಇ-ತಪಾಸಣೆ ಮಾಡಲು ತೆರಿಗೆ ಇಲಾಖೆ ಜನವರಿ ೩೧ರಂದು 'ಆಪರೇಷನ್ ಕ್ಲೀನ್ ಮನಿ'ಗೆ ಚಾಲನೆ ನೀಡಿತ್ತು. ೧೮ ಲಕ್ಷ ಜನ ತೆರಿಗೆದಾರರಿಗೆ ಇ-ಫಿಲ್ಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಂಡು ಉತ್ತರಿಸುವಂತೆ ಈಮೇಲ್ ಗಳನ್ನು ಮತ್ತು ಎಸ್ ಎಂ ಎಸ್ ಗಳನ್ನು ಕಳುಹಿಸಲಾಗಿತ್ತು. 
"ಈ ಅಭ್ಯಾಸದಲ್ಲಿ ಇನ್ನು ಸುಮಾರು ೪.೮೪ ಲಕ್ಷ ಜನ  ಇ-ಫಿಲ್ಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳದೆ ಇರುವುದನ್ನು ಗಮನಿಸಲಾಗಿದೆ. ನೋಂದಾಯಿಸದ ವ್ಯಕ್ತಿಗಳಿಗೆ ಮತ್ತೆ ಎಸ್ ಎಂ ಎಸ್ ಗಳನ್ನು ಕಳುಹಿಸಲಾಗಿದೆ" ಎಂದು ಹೇಳಿಕೆ ತಿಳಿಸಿದೆ. 
ಪಾನ್ ಕಾರ್ಡ್ ಹೊಂದಿರುವ ಮತ್ತು ಇ-ಪೋರ್ಟಲ್ ಗೆ ನೊಂದಾಯಿಸಿಕೊಳ್ಳದ ಜನರ ಮೇಲೆ ಇಲಾಖೆ ಕಣ್ಗಾವಲು ಇರಿಸಿದೆ. ಅಂತಹವರು ಕೂಡಲೇ ನೊಂದಾಯಿಸಿಕೊಂಡು ಉತ್ತರಿಸಲು ಸಲಹೆ ನೀಡಲಾಗಿದೆ ಎಂದು ಹೇಳಿಕೆ ತಿಳಿಸಿದೆ. 
ನೊಂದಾಯಿಸಿಕೊಂಡು ಉತ್ತರ ನೀಡಲು ಕೊನೆಯ ದಿನಾಂಕವನ್ನು ಫೆಬ್ರವರಿ ೧೫ ರವರೆಗೆ ವಿಸ್ತರಿಸಲಾಗಿದೆ. "ತೆರಿಗೆ ಇಲಾಖೆ ಕ್ರಮ ತೆಗೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ವಿಸ್ತರಿಸಲಾದ ದಿನಾಂಕದೊಳಗೆ ನೊಂದಣಿ ಮಾಡಿಕೊಂಡು ಉತ್ತರಿಸಲು ಕೋರಲಾಗಿದೆ" ಎಂದು ಕೂಡ ಹೇಳಿಕೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com