ನವದೆಹಲಿ: ಮರಾಠ ರಾಜ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದ್ದಾರೆ. ."ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯ ದಿನ ಆವರಿಗೆ ನಮಸ್ಕರಿಸುತ್ತೇನೆ. ಇಂತಹ ಧೀರೋಧಾತ ರಾಜ ನಮ್ಮ ನೆಲದಲ್ಲಿ ಹುಟ್ಟಿದ್ದಕ್ಕೆ ಭಾರತಕ್ಕೆ ಹೆಮ್ಮೆ. ."ಜನರ ಕಲ್ಯಾಣವನ್ನು ಎಲ್ಲಕ್ಕಿಂತಲೂ ಎತ್ತರದಲ್ಲಿ ಇಟ್ಟವರು ಶಿವಾಜಿ ಮಹಾರಜ. ಅದ್ಭುತ ಆಡಳಿತ ಕೌಶಲ್ಯವಿದ್ದ ಮಹಾನ್ ರಾಜ ಅವರು" ಎಂದು ಮೋದಿ ಹೇಳಿದ್ದಾರೆ, .ಶಿವಾಜಿ ಮಹಾರಾಜನ ಆದರ್ಶಗಳ ಮಾದರಿಯಲ್ಲಿ ಭಾರತವನ್ನು ಕಟ್ಟುವ ತಮ್ಮ ಪ್ರಯತ್ನದ ಬಗ್ಗೆಯೂ ಮೋದಿ ಮಾತನಾಡಿದ್ದಾರೆ. ."ಶಿವಾಜಿ ಮಹಾರಾಜ್ ಹೆಮ್ಮೆ ಪಡುತ್ತಿದ್ದ, ಅವರ ಆದರ್ಶಗಳನ್ನು ಪೂರೈಸುವುದಕ್ಕೆ ನಾವು ಬಿಡುವಿಲ್ಲದೆ ಶ್ರಮವಹಿಸಿದ್ದೇವೆ" ಎಂದು ಕೂಡ ಅವರು ಹೇಳಿದ್ದಾರೆ. .Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos