ಕೇಂದ್ರ ಸಚಿವೆ ಉಮಾ ಭಾರತಿ
ಪ್ರಧಾನ ಸುದ್ದಿ
ಉತ್ತರಪ್ರದೇಶದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಇದ್ದದ್ದು ಪ್ರಮಾದ: ಉಮಾ ಭಾರತಿ
ಜಾರಿಯಲ್ಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಇರುವುದು ಅತಿ ದೊಡ್ಡ ಪ್ರಮಾದ ಎಂದು ಕೇಂದ್ರ ಸಚಿವೆ ಉಮಾ ಭಾರತಿ
ನವದೆಹಲಿ: ಜಾರಿಯಲ್ಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಇರುವುದು ಅತಿ ದೊಡ್ಡ ಪ್ರಮಾದ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಸೋಮವಾರ ಹೇಳಿದ್ದಾರೆ.
"ನಾವು ಯಾವುದೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಸದೆ ಇರುವುದಕ್ಕೆ ನನಗೆ ಬೇಸರವಾಗಿದೆ. ನಾನು ಅಮಿತ್ ಷಾ (ಬಿಜೆಪಿ ರಾಷ್ಟ್ರಾಧ್ಯಕ್ಷ) ಮತ್ತು ಕೇಶವ್ ಪ್ರಸಾದ್ ಮೌರ್ಯ (ಬಿಜೆಪಿ ರಾಜ್ಯ ಅಧ್ಯಕ್ಷ) ಅವರೊಂದಿಗೆ, ವಿಧಾನಸಭೆಗೆ ಮುಸ್ಲಿಮರನ್ನು ಕರೆತರುವ ಬಗ್ಗೆ ಚರ್ಚಿಸಿದ್ದೆ" ಎಂದು ಉಮಾಭಾರತಿ ಸುದ್ದಿವಾಹಿನಿಯೊಂದಕ್ಕೆ ಹೇಳಿದ್ದಾರೆ.
"ನಾವು (ಮುಸ್ಲಿಮರಿಗೆ) ಟಿಕೆಟ್ ಕೊಡಬಹುದಿತ್ತು ಎಂದು ರಾಜನಾಥ್ ಅವರು ಸರಿಯಾಗಿ ಹೇಳಿದ್ದಾರೆ" ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಯನ್ನುದ್ದೇಶಿಸಿ ಉಮಾ ಭಾರತಿ ಹೇಳಿದ್ದಾರೆ.
ಉಮಾ ಭಾರತಿ ಅವರ ಹೇಳಿಕೆಯನ್ನು ಅವರ ಸಹೋದ್ಯೋಗಿ ಪ್ರಶ್ನಿಸಿದ್ದಾರೆ. ಮುಸ್ಲಿಮರನ್ನು ಕಣಕ್ಕಿಳಿಸುವ ಹಿಂದಿನ ತರ್ಕವೇನು ಎಂದು ಕೇಳಿರುವ ರಾಜ್ಯಸಭಾ ಸದಸ್ಯ ವಿನಯ್ ಕಟಿಯಾರ್ "ಮುಸ್ಲಿಮರು ನಮಗೆ ಮತ ನೀಡದೆ ಇರುವಾಗ, ಅವರಿಕೆ ಟಿಕೆಟ್ ಏಕೆ ನೀಡಬೇಕು?" ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ