ಗುರ್ಮೆಹೆರ್ ಅವರನ್ನು ಬೆದರಿಸುವ ಯಾವುದೇ ಇರಾದೆ ಇರಲಿಲ್ಲ: ಸೆಹ್ವಾಗ್

ಎಬಿವಿಪಿ ವಿರುದ್ಧ ಅಭಿಯಾನ ಪ್ರಾರಂಭಿಸಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮತ್ತು ಕಾರ್ಗಿಲ್ ಹುತಾತ್ಮನ ಪುತ್ರಿ ಗುರ್ಮೆಹೆರ್ ಕೌರ್ ವಿರುದ್ಧ ಮಾಡಿದ್ದ ಟ್ವೀಟ್ ಗಾಗಿ ವಿರೇಂದರ್ ಸೆಹ್ವಾಗ್
ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಪೋಸ್ಟ್ ಗೆ ಸೆಹ್ವಾಗ್ ಮೊದಲು ಮಾಡಿದ್ದ ಟ್ವೀಟ್
ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಪೋಸ್ಟ್ ಗೆ ಸೆಹ್ವಾಗ್ ಮೊದಲು ಮಾಡಿದ್ದ ಟ್ವೀಟ್
ನವದೆಹಲಿ: ಎಬಿವಿಪಿ ವಿರುದ್ಧ ಅಭಿಯಾನ ಪ್ರಾರಂಭಿಸಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮತ್ತು ಕಾರ್ಗಿಲ್ ಹುತಾತ್ಮನ ಪುತ್ರಿ ಗುರ್ಮೆಹೆರ್ ಕೌರ್ ವಿರುದ್ಧ ಮಾಡಿದ್ದ ಟ್ವೀಟ್ ಗಾಗಿ ವಿರೇಂದರ್ ಸೆಹ್ವಾಗ್ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ವಿದ್ಯಾರ್ಥಿಯನ್ನು ಬೆದರಿಸಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಈಗ ಸೆಹ್ವಾಗ್ ರಾಗ ಬದಲಿಸದ್ದು ವಿದ್ಯಾರ್ಥಿಯ ಅಭಿವ್ಯಕ್ತಿ ಸ್ವಾತಂತ್ರದ ಪರವಾಗಿ ಬ್ಯಾಟ್ ಮಾಡಿದ್ದಾರೆ. 
ಕೌರ್ ಅವರ ಅಧ್ಯಾಪಕರು ಮತ್ತು ಕುಟುಂಬ ಸದಸ್ಯರು ಒಳಗೊಂಡಂತೆ ಸೆಹ್ವಾಗ್ ಅವರ ಟ್ವೀಟ್ ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಕೇಳಿಬಂದ ಹಿನ್ನಲೆಯಲ್ಲಿ, ಬೆದರಿಕೆಯ ಯಾವುದೇ ಇರಾದೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
"ಮತ್ತೊಬ್ಬರ ಅಭಿಪ್ರಾಯದ ವಿರುದ್ಧ ಬೆದರಿಕೆ ಹಾಕುವುದಕ್ಕೆ ನಾನು ಟ್ವೀಟ್ ಮಾಡಿದ್ದಲ್ಲ ಬದಲಾಗಿ ಗಂಭೀರ ವಿಷಯವನ್ನು ಗೇಲಿ ಮಾಡುವುದಾಗಿತ್ತು. ಒಪ್ಪಿಗೆಯೋ ಅಥವಾ ವಿರೋಧವೋ ಅದರ ಭಾಗವಾಗಿರಲಿಲ್ಲ" ಎಂದು ಸೆಹ್ವಾಗ್ ಮತ್ತೆ ಟ್ವೀಟ್ ಮಾಡಿದ್ದಾರೆ. 
ಆರ್ ಎಸ್ ಎಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯನ್ನು ವಿರೋಧಿಸಿದ್ದಕ್ಕೆ ಕೌರ್ ವಿರುದ್ಧ ಅತ್ಯಾಚಾರ ಬೆದರಿಕೆ ಬಂದಿರುವುದನ್ನು ಸೆಹ್ವಾಗ್ ಖಂಡಿಸಿದ್ದಾರೆ. 
"ಅವರಿಗೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುವ ಎಲ್ಲ ಹಕ್ಕು ಇದೆ ಮತ್ತು ಅವರ ವಿರುದ್ಧ ಹಿಂಸೆಯ, ಅತ್ಯಾಚಾರದ ಬೆದರಿಕೆ ಹಾಕುವವರು ನೀಚ ಜನ" ಎಂದು ಹೇಳಿದ್ದು "ಯಾವುದೇ ಬೆದರಿಕೆ ಇಲ್ಲದೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುವ ಹಕ್ಕು ಎಲ್ಲರಿಗು ಇದೆ" ಎಂದು ಕೂಡ ಸೆಹ್ವಾಗ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com