ಆಂಧ್ರ ಅಧಿಕಾರಿಯ ಜೊತೆಗೆ ಅನುಚಿತ ವರ್ತನೆ; ಜಗನ್ ವಿರುದ್ಧ ಎಫ್ ಐ ಆರ್

ಸರ್ಕಾರಿ ಅಧಿಕಾರಿಯ ವಿರುದ್ಧ ಅನುಚಿತ ವರ್ತನೆ ತೋರಿದ್ದಕ್ಕೆ ಮತ್ತು ಅವರ ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿ ಪಡಿಸಿದ್ದಕ್ಕೆ ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗಮೋಹನ್ ರೆಡ್ಡಿ ವಿರುದ್ಧ
ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗಮೋಹನ್ ರೆಡ್ಡಿ
ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗಮೋಹನ್ ರೆಡ್ಡಿ
ವಿಜಯವಾಡ: ಸರ್ಕಾರಿ ಅಧಿಕಾರಿಯ ವಿರುದ್ಧ ಅನುಚಿತ ವರ್ತನೆ ತೋರಿದ್ದಕ್ಕೆ ಮತ್ತು ಅವರ ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿ ಪಡಿಸಿದ್ದಕ್ಕೆ ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗಮೋಹನ್ ರೆಡ್ಡಿ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಆಂಧ್ರ ಪ್ರದೇಶ ಪೊಲೀಸರು ಹೇಳಿದ್ದಾರೆ. 
ಸರ್ಕಾರಿ ಒಡೆತನಾದ ಆಸ್ಪತ್ರೆಯ ಅಭಿವೃದ್ಧಿ ಸಮಿತಿ ನೀಡಿರುವ ದೂರಿನ ಹಿನ್ನಲೆಯಲ್ಲಿ ನಂದಿಗ್ರಾಮ ಪೊಲೀಸರು ಜಗನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಬಸ್ ಅಪಘಾತದಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲು ಬಂದಿದ್ದ ವಿಪಕ್ಷ ನಾಯಕ ಮಂಗಳವಾರ ವೈದ್ಯರಿಂದ ಮರಣೋತ್ತರ ಪರೀಕ್ಷೆಯ ವರದಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದರು. 
ಕಲೆಕ್ಟರ್ ಅಹ್ಮದ್ ಬಾಬು ಅವರ ಜೊತೆಗೆ ವಾಗ್ವಾದಕ್ಕಿಳಿದ ವೈ ಎಸ್ ಆರ್ ಸಿ ಪಿ ಮುಖಂಡ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಜೈಲಿಗೆ ಕಳುಹಿಸುವ ಬೆದರಿಕೆಯನ್ನು ಹಾಕಿದ್ದರು. 
ಮೂಲಪಾಡುವಿನ ಸೇತುವೆಯಿಂದ ಬಸ್ ಉರುಳಿ ಬಿದ್ದು ೧೧ ಜನರು ಮೃತಪಟ್ಟು ೩೦ ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿತ್ತು. ಈ ಬಸ್ ಚಾಲಕನ ದೇಹದ ಶವಪರೀಕ್ಷೆ ಮಾಡದೆ ಕಾಲ್ಪನಿಕ ವರದಿ ಬರೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ. 
ಟಿಡಿಪಿ ಸಂಸದ ಜೆ ಸಿ ದಿವಾಕರ್ ರೆಡ್ಡಿ ಒಡೆತನದ ದಿವಾಕರ್ ಟ್ರಾವೆಲ್ಸ್ ಗೆ ಸೇರಿದ ಬಸ್ ಅದಾಗಿತ್ತು ಮತ್ತು ಚಾಲಕ ಮತ್ತಿನಲ್ಲಿದ್ದರು ಎಂಬ ಆರೋಪ ಕೇಳಿಬಂದಿತ್ತು. 
ದಿವಾಕರ್ ಟ್ರಾವೆಲ್ಸ್ ಉಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೂಡ ಜಗನ್ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com