೪೦% ನೋಟುಗಳನ್ನು ಗ್ರಾಮೀಣ ಭಾಗಗಳಿಗೆ ಕಳುಹಿಸಿ: ಬ್ಯಾಂಕ್ ಗಳಿಗೆ ಆರ್ ಬಿ ಐ ಸೂಚನೆ

ಗ್ರಾಮೀಣ ಭಾಗಗಳಿಗೆ ನೋಟುಗಳ ಸರಬರಾಜು ಸಮರ್ಪಕವಾಗಿಲ್ಲ ಎಂದು ಗುರುವಾರ ಹೇಳಿರುವ ಆರ್ ಬಿ ಐ, ಕನಿಷ್ಠ ೪೦% ನೋಟುಗಳನ್ನು ಗ್ರಾಮೀಣ ಭಾಗದ ಬ್ಯಾಂಕ್ ಘಟಕಗಳಿಗೆ ಕಳುಹಿಸುವಂತೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಗ್ರಾಮೀಣ ಭಾಗಗಳಿಗೆ ನೋಟುಗಳ ಸರಬರಾಜು ಸಮರ್ಪಕವಾಗಿಲ್ಲ ಎಂದು ಗುರುವಾರ ಹೇಳಿರುವ ಆರ್ ಬಿ ಐ, ಕನಿಷ್ಠ ೪೦% ನೋಟುಗಳನ್ನು ಗ್ರಾಮೀಣ ಭಾಗದ ಬ್ಯಾಂಕ್ ಘಟಕಗಳಿಗೆ ಕಳುಹಿಸುವಂತೆ ಬ್ಯಾಂಕ್ ಗಳಿಗೆ ಸೂಚಿಸಿದೆ. 
"ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತಿರುವ ಬ್ಯಾಂಕ್ ನೋಟುಗಳು, ಅಲ್ಲಿನ ಜನಸಂಖ್ಯೆಗೆ ಬೇಡಿಕೆಯಿರುವಷ್ಟು ಸಮರ್ಪಕವಾಗಿಲ್ಲ" ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. 
ಗ್ರಾಮೀಣ ಪ್ರದೇಶಗಳಿಗೆ ಕನಿಷ್ಠ ೪೦% ನೋಟುಗಳು ತಲುಪುವಂತೆ ನೋಡಿಕೊಳ್ಳಲು, ಈ ಪ್ರದೇಶಗಳಲ್ಲಿ ಮುಖ್ಯ ಮಾರ್ಗಗಳ ಮೂಲಕ ನೋಟುಗಳ ವಿತರಣೆ ಹೆಚ್ಚಿಸಲು ಬ್ಯಾಂಗ್ ಗಳಿಗೆ ಸೂಚಿಸಲಾಗಿದೆ ಎಂದು ಆರ್ ಬಿ ಐ ಹೇಳಿದೆ. 
"ಗ್ರಾಮೀಣ ಭಾಗಗಳಿಗೆ ಮುಖ್ಯವಾಗಿ ವಿತರಣೆ ಮಾಡಬಲ್ಲ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್ ಆರ್ ಬಿ) ಘಟಕಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಳು (ಡಿಸಿಸಿಬಿ), ವಾಣಿಜ್ಯ ಬ್ಯಾಂಕ್ ಗಳು, ಎ ಟಿ ಎಂ ಗಳು ಮತ್ತು ಅಂಚೆ ಕಚೇರಿಗಳಿಗೆ ಆದ್ಯತೆಯ ಮೇರೆಗೆ ಹೊಸ ನೋಟುಗಳನ್ನು ಬ್ಯಾಂಗ್ ಗಳು ವಿತರಿಸಬೇಕು" ಎಂದು ಆರ್ ಬಿ ಐ ಹೇಳಿದೆ. 
ಈಗ ಲಭ್ಯವಿರುವ ೧೦೦ ರೂ ಮತ್ತು ಅದಕ್ಕೂ ಕಡಿಮೆ ಮೌಲ್ಯದ ನೋಟುಗಳನ್ನು ಯಥೇಚ್ಛವಾಗಿ ಮತ್ತು ನೂತನ ೫೦೦ ರೂ ನೋಟುಗಳನ್ನು ಗ್ರಾಮೀಣ ಭಾಗದ ಘಟಕಗಳಿಗೆ ವಿತರಿಸುವಂತೆ ಆರ್ ಬಿ ಐ ಸೂಚಿಸಿದೆ. 
ಹಾಗೆಯೇ ನಾಣ್ಯಗಳ ಅಗತ್ಯವಿದ್ದರೆ ಆದ್ಯತೆ ಮೇರೆಗೆ ಕೇಂದ್ರ ಬ್ಯಾಂಕ್ ನಿಂದ ಪಡೆಯುವಂತೆ ಕೂಡ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com