ನೋಟು ನಿಷೇಧ ವಿಫಲ; ಮೋದಿಯನ್ನು 'ನೇಣಿಗೇರಿಸಿ' ಸಿಪಿಐ-ಎಂ ಅಣಕು ಪ್ರದರ್ಶನ

ಕೇರಳದ ೧೪ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವ ಕಮ್ಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಪ್ರಧಾನಿ ಮೋದಿ ಅವರನ್ನು ಅಣಕು ವಿಚಾರಣೆಗೆ ಒಳಪಡಿಸಿ
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ತಿರುವನಂತಪುರಂ: ಕೇರಳದ ೧೪ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವ ಕಮ್ಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕು ವಿಚಾರಣೆಗೆ ಒಳಪಡಿಸಿ ನೇಣುಗಂಬಕ್ಕೇರಿಸಲಿದೆ. 
ಮೋದಿ ಅವರು ನವೆಂಬರ್ ೮ ರಂದು ೫೦೦ ಮತ್ತು ೧೦೦ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಘೋಷಿಸಿದ್ದರು. ನಂತರ ಸಾಮಾನ್ಯ ಜನ ಎಟಿಎಂ ಗಳ ಎದುರು ದೊಡ್ಡ ದೊಡ್ಡ ಸಾಲುಗಳಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಒದಗಿತ್ತು. ಹಲವು ದಿನಗಳ ನಂತರ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ಈ ನಿರ್ಧಾರ ಸಫಲವಾಗದಿದ್ದರೆ 'ನನ್ನನ್ನು ನೇಣುಗಂಬಕ್ಕೇರಿಸಿ' ಎಂದು ಘೋಷಿಸಿದ್ದರು.
ಇದಕ್ಕಾಗಿ ಪ್ರತಿಭಟನೆಗಳನ್ನು ನಡೆಸಲು ಸಿಪಿಐ-ಎಂ ಕೇಂದ್ರ ಸಮಿತಿ ನಿರ್ಧರಿಸಿದೆ. ಕಾರ್ಪೊರೇಟ್ ಸಂಸ್ಥೆಗಳನ್ನು ಓಲೈಸಲು ಈ ನೋಟು ಹಿಂಪಡೆತ ನಿರ್ಧಾರವನ್ನು ಘೋಷಿಸಲಾಗಿತ್ತು ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಬುಧವಾರ ವರದಿಗಾರರಿಗೆ ಹೇಳಿದ್ದಾರೆ. 
"ಈ ನಿರ್ಧಾರದಿಂದ ಕೇರಳ ಆರ್ಥಿಕ ವ್ಯವಸ್ಥೆ ಕುಸಿದಿದೆ. ಪ್ರತಿ ವಲಯವು ಇದರಿಂದ ತೊಂದರೆ ಅನುಭವಿಸಿದೆ. ಜನರ ಬೆಂಬಲದೊಂದಿಗೆ ನಾವು ಪ್ರತಿಭಟನೆ ನಡೆಸಲಿದ್ದೇವೆ" ಎಂದು ಬಾಲಕೃಷ್ಣನ್ ಹೇಳಿದ್ದಾರೆ. 
"ತಿರುವನಂತಪುರಂ ಮತ್ತು ಕೊಚ್ಚಿಯ ಆರ್ ಬಿ ಐ ಕಚೇರಿಗಳಲ್ಲಿ ಹಿಂಪಡೆದಿರುವ ನೋಟುಗಳನ್ನು ಒಪ್ಪಿಕೊಳ್ಳುವಂತೆ ಮಾಡಲು ಕೇಂದ್ರದ ಸಹಾಯ ಕೇಳಲಿದ್ದೇವೆ" ಎಂದು ಕೂಡ ಅವರು ಹೇಳಿದ್ದಾರೆ. 
ಮೋದಿ ಮಾತು ವಿತ್ತ ಸಚಿವ ಅರುಣ್ ಜೈಟ್ಲಿ ಅವರ ವಂಚನೆಯ ನಡೆ ಈ ನೋಟು ಹಿಂಪಡೆತ ನಿರ್ಧಾರ ಎಂದು ಮಾಜಿ ಮುಖ್ಯಮಂತ್ರಿ ವಿ ಎಸ್ ಅಚ್ಚುತಾನಂದನ್ ಹೇಳಿದ್ದಾರೆ. 
"ವಿತ್ತ ಸಚಿವಾಲಯ ಅಸಂಖ್ಯಾತ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತಿರುವುದನ್ನು ನೋಡಿದರೆ, ಇದರ ಬಗ್ಗೆ ಆರ್ ಬಿ ಐ ಗೆ ಮಾಹಿತಿಯೇ ಇರಲಿಲ್ಲ ಎಂಬುದು ತಿಳಿಯುತ್ತದೆ. ಅದಾನಿಗಳನ್ನು ಮತ್ತು ಅಂಬಾನಿಗಳನ್ನು ಓಲೈಸಲು ತೆಗೆದುಕೊಂಡ ಕ್ರಮ ಇದು ಮತ್ತು ಇದಕ್ಕಾಗಿ ಸಾಮಾನ್ಯ ಮನುಷ್ಯನನ್ನ ಲೂಟಿ ಮಾಡಲಾಯಿತು" ಎಂದು ಅಚ್ಚುತಾನಂದ್ ಹೇಳಿದ್ದಾರೆ. 
ಈ ನಿರ್ಧಾರದ ಸಮಯದಲ್ಲಿ ಎಟಿಎಂ ಅಥವಾ ಬ್ಯಾಂಕ್ ಸರತಿ ಸಾಲುಗಳಲ್ಲಿ ನಿಂತು ಅಕಾಲಿಕ ಮರಣಕ್ಕೆ ತುತ್ತಾದವರ ಕುಟುಂಬಗಳಿಗೆ ೨ ಲಕ್ಷ ರೂ ಪರಿಹಾರ ನೀಡಲು ಕೂಡ ಬುಧವಾರ ಸಂಪುಟ ಸಭೆ ನಿರ್ಣಯ ತೆಗೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com