ಕಾಶ್ಮೀರಿ ಪಂಡಿತರು ಹಿಂದಿರುಗಲು ನಿರ್ಣಯ ಅಂಗೀಕರಿಸಿದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ

ಕಣಿವೆಯಿಂದ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರು ಮತ್ತು ಇತರರು ಹಿಂದಿರುಗಲು ಅನುವಾಗಲು ಪೂರಕ ವಾತಾವರಣ ಸೃಷ್ಟಿಸಲು ತೆಗೆದುಕೊಂಡಿರುವ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜಮ್ಮು: ಕಣಿವೆಯಿಂದ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರು ಮತ್ತು ಇತರರು ಹಿಂದಿರುಗಲು ಅನುವಾಗಲು ಪೂರಕ ವಾತಾವರಣ ಸೃಷ್ಟಿಸಲು ತೆಗೆದುಕೊಂಡಿರುವ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಅವಿರೋಧವಾಗಿ ಅಂಗೀಕರಿಸಿದೆ. 
ಈ ಬೆಳಗ್ಗೆ ವಿಧಾನಸಭೆ ಜಾರಿಯಾದ ಸ್ವಲ್ಪ ಸಮಯದ ನಂತರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕಾಶ್ಮೀರಿ ಪಂಡಿತರು ಮತ್ತು ಇತರ ವಲಸಿಗಳು ಹಿಂದಿರುಗಲು ವಿಧಾನಸಭೆ ನಿರ್ಣಯ ಅಂಗೀಕರಿಸಬೇಕು ಎಂದು ಹೇಳಿದರು. 
ಕಾಶ್ಮೀರಿ ಪಂಡಿತರ ಸಮುದಾಯ, ಸಿಖ್ ಸಮುದಾಯದ ಸದಸ್ಯರು ಮತ್ತು ಕೆಲವು ಮುಸ್ಲಿಮರು ೨೭ ವರ್ಷದ ಹಿಂದೆ ದುರದೃಷ್ಟಕರ ಸನ್ನಿವೇಶದಲ್ಲಿ ಕಣಿವೆ ತೊರೆದು ಹೋಗಿದ್ದರು ಎಂದು ತಿಳಿಸಿದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಕಾರ್ಯಕಾರಿ ಅಧ್ಯಕ್ಷ "ಅವರು (ಕಾಶ್ಮೀರಿ ಪಂಡಿತರು, ಕೆಲವು ಸಿಖ್ ಮತ್ತು ಮುಸ್ಲಿಂ ಸಮುದಾಯದ ಸದಸ್ಯರು) ಕಣಿವೆ ತೊರೆದು ಹೋಗಿದ್ದಕ್ಕೆ ಇಂದಿಗೆ ೨೭ ವರ್ಷ ಮತ್ತು ಅವರು ಹಿಂದಿರುಗುವಿಕೆಗಾಗಿ ಪಕ್ಷದ ರಾಜಕೀಯವನ್ನು ಮೀರಿ ಈ ನಿರ್ಣಯ ಅನುಮೋದಿಸಬೇಕಿದೆ" ಎಂದು ಒಮರ್ ಹೇಳಿದ್ದಾರೆ. 
ಪ್ರಶ್ನೋತ್ತರ ಅವಧಿ ಕೊನೆಯಾಗುವ ವೇಳೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಅಬ್ದುಲ್ ರೆಹಮಾನ್ ಈ ನಿರ್ಣವನ್ನು ಅನುಮೋದಿಸಿದ್ದಾರೆ. ಸ್ಪೀಕರ್ ಕವಿಂದರ್ ಗುಪ್ತ ಮಂಡಿಸಿದ ಈ ನಿರ್ಣಯವನ್ನು ಕೂಗು ಮತದ ಮೂಲಕ ಅಂಗೀಕರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com