ಆರ್ ಎಸ್ ಎಸ್ ಮೀಸಲಾತಿ ಹೇಳಿಕೆ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಪಾಸ್ವಾನ್

ಮೀಸಲಾತಿ ಸಾಂವಿಧಾನಿಕ ಹಕ್ಕು ಅದನ್ನು ಯಾರು ತೊಡೆದುಹಾಕಲು ಸಾಧ್ಯವಿಲ್ಲ ಎಂದಿರುವ ಬಿಜೆಪಿ ಪಕ್ಷದ ಮಿತ್ರ ಎಲ್ ಜೆ ಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್,
ಎಲ್ ಜೆ ಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್
ಎಲ್ ಜೆ ಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್
ನವದೆಹಲಿ: ಮೀಸಲಾತಿ ಸಾಂವಿಧಾನಿಕ ಹಕ್ಕು ಅದನ್ನು ಯಾರು ತೊಡೆದುಹಾಕಲು ಸಾಧ್ಯವಿಲ್ಲ ಎಂದಿರುವ ಬಿಜೆಪಿ ಪಕ್ಷದ ಮಿತ್ರ ಎಲ್ ಜೆ ಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಮೀಸಲಾತಿಯ ವಿರುದ್ಧ ಆರ್ ಎಸ್ ಎಸ್ ಮಾಡಿದ್ದ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. 
"ಮೀಸಲಾತಿ ಸಾಂವಿಧಾನಿಕ ಹಕ್ಕು ಅದನ್ನು ಯಾರು ತೊಡೆದುಹಾಕಲು ಸಾಧ್ಯವಿಲ್ಲ. ಮೀಸಲಾತಿಯನ್ನು (ಎಸ್ ಸಿ/ ಎಸ್ ಟಿ), ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ನಡುವೆ ನಡೆದ ಪುಣೆ ಒಪ್ಪಂದದ ಪ್ರಕಾರ ದೇಶದಲ್ಲಿ ಜಾರಿ ಮಾಡಲಾಗಿತ್ತು. ಇದು ಯಾರೋ ನೀಡುತ್ತಿರುವ ಧರ್ಮವೇನಲ್ಲ ಆದುದರಿಂದ ಇದನ್ನು ತೊಡೆದುಹಾಕಲು ಸಾಧ್ಯವಿಲ್ಲ" ಎಂದು ನರೇಂದ್ರ ಮೋದಿ ಸರ್ಕಾರದ ಪ್ರಮುಖ ದಲಿತ ಮುಖಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಈ ಮೀಸಲಾತಿ ವ್ಯವಸ್ಥೆಯ ಯಾವುದೇ ಬದಲಾವಣೆ ತರುವುದನ್ನು "ಸಂಸತ್ತಿನಿಂದ ಬೀದಿಗಳಲ್ಲಿ" ಉಗ್ರವಾಗಿ ತಮ್ಮ ಪಕ್ಷ ಎಲ್ ಜೆ ಪಿ ವಿರೋಧಿಸಲಿದೆ ಎಂದು ಕೂಡ ಅವರು ಹೇಳಿದ್ದಾರೆ. 
ಆರ್ ಎಸ್ ಎಸ್ ಚುನಾವಣಾ ಸಮಯದಲ್ಲಿ ಇಂತಹ ಪ್ರತಿಕ್ರಿಯೆಗಳನ್ನು ಏಕೆ ನೀಡುತ್ತದೆಯೇ ಎಂದು ಅಚ್ಚರಿ ವ್ಯಕ್ತಪಡಿಸಿರುವ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಪ್ರಚಾರ ಮುಖ್ಯಸ್ಥ ಮನಮೋಹನ್ ವೈದ್ಯ ನೀಡಿರುವ ಇಂತಹ ಪ್ರತಿಕ್ರಿಯೆಗಳಿಂದ ಜನ ಗೊಂದಲಗೊಳ್ಳುವುದು ಸ್ವಾಭಾವಿಕ ಎಂದಿದ್ದಾರೆ. 
"ಕಳೆದ ಬಾರಿ ಬಿಹಾರ ಚುನಾವಾಣಾ ಸಮಯದಲ್ಲಿ ಆರ್ ಎಸ್ ಎಸ್ ಇಂತಹ ಪ್ರತಿಕ್ರಿಯೆ ನೀಡಿತ್ತು ಮತ್ತು ಈಗ ಉತ್ತರ ಪ್ರದೇಶ ಚುನಾವಣೆಯ ಸಮಯದಲ್ಲಿಯೂ ಹೇಳಿದೆ. ಚುನಾವಣೆಗಳು ಸಮೀಪಿಸುವಾಗ ಇಂತಹ ಹೇಳಿಕೆಗಳನ್ನು ನೀಡುವುದೇಕೆ ಎಂಬುದು ಅರ್ಥವಾಗುತ್ತಿಲ್ಲ. 
"ಇದರಿಂದ ಬಿಹಾರದಲ್ಲಿ ನಮಗೆ ಬಹಳಷ್ಟು ನಷ್ಟವಾಗಿತ್ತು. ಆರ್ ಎಸ್ ಎಸ್ ಸ್ವತಂತ್ರ ಸಂಸ್ಥೆ ಮತ್ತು ಇಂತಹ ಹೇಳಿಕೆಗಳನ್ನು ಏಕೆ ನೀಡುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಇಂತಹ ಪ್ರತಿಕ್ರಿಯೆಗಳಿಂದ ಜನ ಗೊಂದಲಗೊಳ್ಳುವುದು ಸ್ವಾಭಾವಿಕ" ಎಂದು ಪಾಸ್ವಾನ್ ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com