ಮದ್ಯ ಸೇವಿಸಿ ವಾಹನ ಚಾಲನೆ; ತ್ರಿಪುರ ನ್ಯಾಯಾಧೀಶರಿಗೆ ಶಿಕ್ಷೆ

ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಆರೋಪಕ್ಕೆ ಪ್ರಾದೇಶಕ ನ್ಯಾಯಾಲಯದ ನ್ಯಾಯಮೂರ್ತಿಗೆ, ತ್ರಿಪುರ ಹೈಕೋರ್ಟ್ ಶಿಕ್ಷೆ ನೀಡಿದೆ ಎಂದು ಸೋಮವಾರ ನ್ಯಾಯಾಲಯ ಸೂಚನೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅಗರ್ತಲಾ: ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಆರೋಪಕ್ಕೆ ಪ್ರಾದೇಶಕ ನ್ಯಾಯಾಲಯದ ನ್ಯಾಯಮೂರ್ತಿಗೆ, ತ್ರಿಪುರ ಹೈಕೋರ್ಟ್ ಶಿಕ್ಷೆ ನೀಡಿದೆ ಎಂದು ಸೋಮವಾರ ನ್ಯಾಯಾಲಯ ಸೂಚನೆ ತಿಳಿಸಿದೆ. 
"ವಿಸ್ತೃತ ತನಿಖೆ ನಡೆಸಿದ ನಂತರ ಮುಖ್ಯ ನ್ಯಾಯಾಧೀಶ ಟಿ ವೈಫೇಯ್ ಮುಂದಾಳತ್ವದ ತ್ರಿಪುರಾ ಹೈಕೋರ್ಟ್, ಜೂನ್ ೬, ೨೦೧೪ ರ ಮಧ್ಯರಾತ್ರಿ ನಶೆಯಲ್ಲಿ ಖಾಸಗಿ ವಾಹನವನ್ನು ಅಪಾಯದ ಸುಳಿಯಲ್ಲಿ ಚಾಲನೆ ಮಾಡುತ್ತಿದ್ದಕ್ಕೆ ಮೊಟೊಮ್ ಡೆಬ್ಬರ್ಮ ಅವರ ಎರಡು ವೇತನ ಭಡ್ತಿಯನ್ನು ತಡೆಹಿಡಿಯಲು ನಿರ್ಣಯಿಸಿದೆ" ಎಂದು ಸೂಚನೆಯಲ್ಲಿ ತಿಳಿಸಿದೆ. 
ಹೈಕೋರ್ಟ್ ನ ರಿಜಿಸ್ಟಾರ್ ಜನರಲ್ ಗೋಪಾಲ್ ಚಟ್ಟೋಪಾಧ್ಯಾಯ ಹೊರಡಿಸುವ ಸೂಚನಾ ನಡವಳಿಕೆಯಲ್ಲಿ ಸೇಫಾಹಿಜಲ ಜಿಲ್ಲೆಯ ಬಿಶಾಲ್ಗರ್ ನ ಸಿವಿಲ್ ಮತ್ತು ಜ್ಯುಡಿಶಿಯಲ್ ಮೆಜೆಸ್ಟ್ರೇಟ್ ಮತ್ತು ಸದ್ಯದ ಉತ್ತರ ತ್ರಿಪುರ ಜಿಲ್ಲೆಯ ಕಾಂಚನಪುರದ ಉಪ ವಿಭಾಗೀಯ ಜ್ಯುಡಿಶಿಯಲ್ ಮತ್ತು ಸಿವಿಲ್ ಮೆಜೆಸ್ಟ್ರೇಟ್ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಕೂಡ ತಿಳಿಸಿದೆ. 
"ತಮ್ಮ ತಪ್ಪನ್ನು ಮನ್ನಿಸುವಂತೆ ನ್ಯಾಯಾಧೀಶರು ಲಿಖಿತ ಪತ್ರ ಬರೆದಿದ್ದಾರೆ. ಈ ಘಟನೆಯ ನಂತರ ಅವರನ್ನು ಪೊಲೀಸರು ಬಂಧಿಸಿದ್ದರು ಮತ್ತು ೧೦ ಘಂಟೆಗಳವರೆಗೆ ಪೋಲೀಸರ ವಶದಲ್ಲಿದ್ದರು" ಎಂದು ಕೂಡ ಹೈಕೋರ್ಟ್ ಅಧಿಕಾರಿ ಹೇಳಿದ್ದಾರೆ. 
ಡೆಬ್ಬರ್ಮ ಅವರು ಈ ಬಂಧನದ ನಂತರ ನಂತರ ವಿವರಗಳನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿಲ್ಲ, ಅದು ಕೂಡ ನಿಯಮಬಾಹಿರ ಎಂದು ಕೂಡ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com