ಪಂಜಾಬ್ ಸಿಎಂ ಅಭ್ಯರ್ಥಿ ಕ್ಯಾಪ್ಟನ್ ಅಮರಿಂದರ್ ಸಿಂಗ್: ರಾಹುಲ್ ಗಾಂಧಿ

ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ...
ಕಾಂಗ್ರೆಸ್ ರ್ಯಾಲಿಯಲ್ಲಿ ರಾಹುಲ್ ಗಾಂಧಿ
ಕಾಂಗ್ರೆಸ್ ರ್ಯಾಲಿಯಲ್ಲಿ ರಾಹುಲ್ ಗಾಂಧಿ

ಪಂಜಾಬ್: ಕ್ಯಾಪ್ಟನ್ ಅಮರಿಂದರ್ ಸಿಂಗ್  ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ.

ಇಂದು ಪಂಜಾಬ್ ನ ಮಾಜಿತಾದಲ್ಲಿ  ರ್ಯಾಲಿ ಉದ್ದೇಶಿಸಿ ಮಾತನಾಡಿದ, ರಾಹುಲ್ ಗಾಂಧಿ ಸದ್ಯ ಅಧಿಕಾರ ನಡೆಸುತ್ತಿರುವ ಅಕಾಲಿದಳ ರಾಜ್ಯವನ್ನು ನಾಶಮಾಡಿದೆ. ಹೀಗಾಗಿ ಪಂಜಾಬ್ ನಲ್ಲಿ ಪಂಜಾಬಿ ಸರ್ಕಾರವೇ ಅಧಿಕಾರಕ್ಕೆ ಬರಬೇಕು ಎಂದು ಅವರು ಹೇಳಿದ್ದಾರೆ.

ಈ ಬಾರಿ ಪಂಜಾಬ್ ನಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಧಿಕಾರ ನಡೆಸುತ್ತಾರೆ ಎಂದು ಹೇಳಿದ ರಾಹುಲ್, ಪಂಜಾಬ್ ಅನ್ನು ಬದಲಾವಣೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆ ನೀಡಿದರು.

ಪಂಜಾಬ್ ನಲ್ಲಿರುವ ಡ್ರಗ್ ಮಾಫಿಯಾ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವುದಾಗಿ, ಆ ನಿಟ್ಟಿನಲ್ಲಿ ಜೊತೆಯಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.

ರಾಜ್ಯದ ರೈತರು ಕಂಗಲಾಗಿದ್ದಾರೆ, ಆಡಳಿತದಲ್ಲಿರುವ ಸರ್ಕಾರ ಅವರೆಡೆಗೆ ಗಮನ ಹರಿಸುತ್ತಿಲ್ಲ, ಬಾದಲ್ ಅವರು ಕೇವಲ ಅವರ ಸಂಬಂಧಿಕರು ಹಾಗೂ ಹತ್ತಿರದವರಿಗೆ ಮಾತ್ರ ಸಹಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದಾಗಿ ಮೋದಿ ಹೇಳುತ್ತಾರೆ. ಹೀಗಿದ್ದಾಗ ಏಕೆ ಅವರು ಅಕಾಲಿದಳಕ್ಕೆ ಬೆಂಬಲ ನೀಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅಕಾಲಿ ದಳ ಪಂಡಾಬ್ ರಾಜ್ಯವನ್ನು ಹಾಳು ಮಾಡುತ್ತಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದು ರಾಹುಲ್ ತಿಳಿಸಿದ್ದಾರೆ.

ಪಂಜಾಬ್ ನಲ್ಲಿ ಶೇ. 70 ರಷ್ಟು ಯುವಕರು ಮಾದಕ್ಯ ವ್ಯಸನಿಗಳಾಗಿದ್ದಾರೆ ಎಂದು ವರ್ಷದ ಹಿಂದೆ ಹೇಳಿದ್ದೆ, ಆ ವೇಳೆ ಬಾದಲ್ ನನ್ನನ್ನು ಹಾಸ್ಯ ಮಾಡಿದ್ದರು. ಆದರೆ ಈಗ ಇಡೀ ಪಂಜಾಬ್ ಅದರಲ್ಲಿ ಮುಳುಗಿದೆ ಎಂದು ರಾಹುಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com