ಬಾಲಿ ಕಾರಾಗೃಹದಿಂದ ಭಾರತೀಯ ಪರಾರಿ

ಇಂಡೋನೇಷಿಯಾದ ಬಾಲಿ ದ್ವೀಪದ ಕಾರಾಗೃಹದಿಂದ ತಪ್ಪಿಸಿಕೊಂಡು ಪಾರಾರಿಯಾಗಿರುವ ವಿದೇಶಿ ಖೈದಿಗಳಲ್ಲಿ ಭಾರತೀಯನೊಬ್ಬನು ಸೇರಿದ್ದಾನೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.
ಸಾಂದರ್ಭಿಯ ಚಿತ್ರ
ಸಾಂದರ್ಭಿಯ ಚಿತ್ರ
ಜಕಾರ್ತಾ: ಇಂಡೋನೇಷಿಯಾದ ಬಾಲಿ ದ್ವೀಪದ ಕಾರಾಗೃಹದಿಂದ ತಪ್ಪಿಸಿಕೊಂಡು ಪಾರಾರಿಯಾಗಿರುವ ವಿದೇಶಿ ಖೈದಿಗಳಲ್ಲಿ ಭಾರತೀಯನೊಬ್ಬನು ಸೇರಿದ್ದಾನೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. 
ಭಾರತ ಮೂಲದ ಸಯ್ಯದ್ ಮೊಹಮದ್, ಆಸ್ಟ್ರೇಲಿಯಾದ ಶಾನ್ ಎಡ್ವರ್ಡ್ ಡೇವಿಡ್ಸನ್, ಬಲ್ಗೇರಿಯಾದ ಡಿಮಿಟ್ರಿ ನಿಕೊಲೊವ್ ಮತ್ತು ಮಲೇಷಿಯಾದ ಟೀ ಕಾಕ್ ಕಿಂಗ್ ತಪ್ಪಿಸಿಕೊಂಡಿರುವ ಖೈದಿಗಳು ಎಂದು ಬಿಬಿಸಿ ವರದಿ ಮಾಡಿದೆ. 
ಮಾದಕ ದ್ರವ್ಯಗಳ ವ್ಯಾಪಾರ ಮತ್ತು ಮೋಸದ ಪ್ರಕರಣಗಳಲ್ಲಿ ಈ ನಾಲ್ವರು ಕೆರೊಕೊಬಾನ್ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತದ್ದರು. ಈಗ ಸುರಂಗ ಕೊರೆದು ಇವರೆಲ್ಲರೂ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. 
ಇವರೆಲ್ಲರೂ ಇನ್ನು ರೆಸಾರ್ಟ್ ದ್ವಿಪದಲ್ಲಿಯೇ ಇರುವ ಸಾಧ್ಯತೆ ಇದೆ ಎಂದು ಕಾರಾಗೃಹದ ಮುಖ್ಯಸ್ಥ ಟೋನಿ ನೈನ್ಗೋಲನ್ ಹೇಳಿದ್ದಾರೆ. 
ಇವರೆಲ್ಲರೂ ಸೋಮವಾರ ಬೆಳಗ್ಗೆಯಿಂದ ತಪ್ಪಿಸಿಕೊಂಡಿರುವುದು ಮಾಮೂಲಿ ಗಸ್ತಿನಲ್ಲಿ ತಿಳಿದುಬಂದಿದೆ ಎಂದು ವರದಿಯಾಗಿದೆ. 
ಮೇನಲ್ಲಿ ಶುಕ್ರವಾರದ ಪ್ರಾರ್ಥನೆಗೆ ಹೊರಗೆ ಬಿಟ್ಟಾಗ ಎದ್ದ ದೊಂಬಿಯಲ್ಲಿ ಸುಮಾತ್ರಾ ದ್ವೀಪದ ಜೈಲಿನಿಂದ ೨೦೦ ಖೈದಿಗಳು ಪರಾರಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com