ಗುಲ್ಬರ್ಗ್ ಹತ್ಯಾಕಾಂಡ: ವಿ ಎಚ್ ಪಿ ಮುಖಂಡನಿಗೆ ಜಾಮೀನು ನೀಡಿದ ಗುಜರಾತ್ ಹೈಕೋರ್ಟ್

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ವಿಶ್ವ ಹಿಂದೂ ಪರಿಷದ್ ನ ಮುಖಂಡ ಅತುಲ್ ವೈದ್ಯನಿಗೆ ಗುಜರಾತ್ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಗಾಂಧಿನಗರ: ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ವಿಶ್ವ ಹಿಂದೂ ಪರಿಷದ್ ನ ಮುಖಂಡ ಅತುಲ್ ವೈದ್ಯನಿಗೆ ಗುಜರಾತ್ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ಇದಕ್ಕೂ ಮುಂಚಿತವಾಗಿ ವಿಶೇಷ ನ್ಯಾಯಾಲಯ ೬೯ ಜನರನ್ನು ಹತ್ಯೆಗೈದಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೧೧ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ, ೧೨ ಜನಕ್ಕೆ ಏಳು ವರ್ಷಗಳ ಜೈಲು ಸಜೆ ಮತ್ತು ಒಬ್ಬನಿಗೆ ೧೦ ವರ್ಷ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿತ್ತು. 
೧೪ ವರ್ಷ ಹಳೆಯ ಈ ಪ್ರಕರಣದಲ್ಲಿ ವಿಶೇಷ ತನಿಖಾ ನ್ಯಾಯಾಲಯ ೨೪ ಜನರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿ ಶಿಕ್ಷೆ ನೀಡಿತ್ತು. ಈ ಪ್ರಕರಣದ ವಿಚಾರಣೆ ೨೦೦೯ರಲ್ಲಿ ಪ್ರಾರಂಭವಾಗಿತ್ತು.
ಈ ತೀರ್ಪಿನ ವಿರುದ್ಧ ಮಾಜಿ ಕಾಂಗ್ರೆಸ್ ಸಂಸದ ಎಷಾನ್ ಜಾಫ್ರಿ ಅವರ ಪತ್ನಿ ಜಾಕಿಯ ಜಾಫ್ರಿ ಮತ್ತು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಅಸಮಾಧಾನ ವ್ಯಕ್ತಪಡಿಸಿದ್ದರು. 
ಈ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಕೌನ್ಸಲ್ಲರ್ ಬಿಪಿನ್ ಪಟೇಲ್ ಒಳಗೊಂಡಂತೆ ೩೬ ಜನರನ್ನು ಆರೋಪಮುಕ್ತಗೊಳಿಸಿದ್ದ ನ್ಯಾಯಾಧೀಶ ಪಿಬಿ ದೇಸಾಯಿ, ಈ ಪ್ರಕರಣ ಪೂರ್ವನಿಯೋಜಿತವಾಗಿರಲಿಲ್ಲ ಎಂದಿದ್ದರು. 
ಗುಜರಾತಿನ ಕೋಮು ಗಲಭೆಯಲ್ಲಿ ಫೆಬ್ರವರಿ ೨೮,೨೦೦೨ ರಂದು ನಡೆದ ಈ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಸಂಸದ ಎಷಾನ್ ಜಾಫ್ರಿ ಅವರನ್ನು ಒಳಗೊಂಡಂತೆ ೬೯ ಜನರನ್ನು ಹತ್ಯೆಗೈಯ್ಯಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com