ಅಲ್ಪಸಂಖ್ಯಾತರಿಗೆ ಅಭದ್ರತೆ ಕಾಡುತ್ತಿಲ್ಲ: ನಖ್ವಿ

ದೇಶದಲ್ಲಿ ಅಲ್ಪಸಂಖ್ಯಾತರ ನಡುವೆ ಅಭದ್ರತೆಯ ಭಾವನೆ ಇಲ್ಲ ಎಂದು ಗುರುವಾರ ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಚಿವ ಮುಕ್ತರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಚಿವ ಮುಕ್ತರ್ ಅಬ್ಬಾಸ್ ನಖ್ವಿ
ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಚಿವ ಮುಕ್ತರ್ ಅಬ್ಬಾಸ್ ನಖ್ವಿ
ನವದೆಹಲಿ: ದೇಶದಲ್ಲಿ ಅಲ್ಪಸಂಖ್ಯಾತರ ನಡುವೆ ಅಭದ್ರತೆಯ ಭಾವನೆ ಇಲ್ಲ ಎಂದು ಗುರುವಾರ ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಚಿವ ಮುಕ್ತರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. 
"ಅಲ್ಪಸಂಖ್ಯಾತರ ನಡುವೆ ಯಾವುದೇ ಭಯ ಇಲ್ಲ ಮತ್ತು ಅಭದ್ರತೆಯ ಭಾವನೆ ಕೂಡ ಕಾಡುತ್ತಿಲ್ಲ" ಎಂದು ಕಾರ್ಯಕ್ರಮವೊಂದರಲ್ಲಿ ನಖ್ವಿ ಹೇಳಿದ್ದಾರೆ. 
"ಆದರೆ ಇಲ್ಲಿ ಘಟಿಸುತ್ತಿರುವ ಯಾವುದಾದರೂ, ಅದು ಕ್ರಿಮಿನಲ್ ಅಪರಾಧವಾಗಿರಲಿ ಅಥವಾ ಕ್ರಿಮಿನಲ್ ಪಿತೂರಿಯಾಗಿರಲಿ, ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ" ಎಂದು ವಿವಿಧ ಪ್ರದೇಶಗಳಲ್ಲಿ ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಕೊಲೆ ಅಪರಾಧಗಳ ಕುರಿತು ಹೇಳಿದ್ದಾರೆ. 
"ನಾವು ನಂಬಿಕೆಯ ವಾತಾವರಣ ಮೂಡಿಸಿ ಅಭಿವೃದ್ಧಿಯತ್ತ ಮುಂದುವರೆಯಬೇಕು" ಎಂದು ಕೂಡ ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com