ಕೇರಳ ಸಿಎಂ ತಲೆಗೆ 1 ಕೋಟಿ ರು. ಬಹುಮಾನ, ಹೇಳಿಕೆ ಹಿಂಪಡೆದ ಆರ್ ಎಸ್ ಎಸ್ ಮುಖಂಡ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ತೆಗೆದರೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿ,....
ಕುಂದಲ್ ಚಂದ್ರಾವತ್, ಪಿಣರಾಯ್ ವಿಜಯನ್
ಕುಂದಲ್ ಚಂದ್ರಾವತ್, ಪಿಣರಾಯ್ ವಿಜಯನ್
ಉಜ್ಜೈನಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ತೆಗೆದರೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿ, ತೀವ್ರ ವಿವಾದಕ್ಕಿಡಾಗಿದ್ದ ಆರ್ ಎಸ್ ಎಸ್ ಮುಖಂಡ ಕುಂದನ್ ಚಂದ್ರಾವತ್ ಅವರು ಶುಕ್ರವಾರ ತಮ್ಮ ಹೇಳಿಕೆ ಹಿಂಪಡೆದಿದ್ದಾರೆ.
ಆರ್ ಎಸ್ಎಸ್ ಒತ್ತಡಕ್ಕೆ ಮಣಿದು ಕುಂದನ್ ಅವರು ಬಹಿರಂಗ ಸಭೆಯಲ್ಲಿ ತಾವು ನೀಡಿದ್ದ ಹೇಳಿಕೆಯನ್ನು ಹಿಂಪಡೆದಿರುವುದಾಗಿ ಹೇಳಿ, ವಿಷಾದ ವ್ಯಕ್ತಪಡಿಸಿದ್ದಾರೆ.
'ನನಗೆ ಕೇರಳದಿಂದ ಕೊಲೆ ಬೆದರಿಕೆ ಕರೆಗಳು ಬಂದಿದ್ದವು ಮತ್ತು ಸ್ವಯಂ ಸೇವಕರ ಹತ್ಯೆ ಪ್ರಕರಣದ ನೋವಿನಿಂದ ನಾನು ಉಜ್ಜೈನಿಯ ಸಭೆಯಲ್ಲಿ ಮಾತನಾಡುವಾಗ ಭಾವೋದ್ವೇಗಕ್ಕೆ ಒಳಗಾಗಿ ಕೇರಳ ಸಿಎಂ ತಲೆ ತೆಗೆದರೆ ಒಂದು ಕೋಟಿ ನೀಡುವುದಾಗಿ ಹೇಳಿಕೆ ನೀಡಿದ್ದೆ. ಆದರೆ ಈಗ ಆ ಹೇಳೆಕೆಯನ್ನು ವಾಪಸ್ ಪಡೆಯುತ್ತಿದ್ದೇನೆ ಮತ್ತು ಹೇಳಿಕೆಗೆ ವಿಷಾದ ವ್ಯಕ್ತಪಡಿಸುವುದಾಗಿ' ಆರ್ ಎಸ್ಎಸ್ ಸಹ ಪ್ರಚಾರ ಪ್ರಮುಖ್ ಕುಂದನ್ ಚಂದ್ರಾವತ್ ಅವರು ತಿಳಿಸಿದ್ದಾರೆ. 
ಚಂದ್ರಾವತ್ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆರ್ ಎಸ್ಎಸ್ ಕೂಡಾ ಇದು ನಮ್ಮ ಸಂಸ್ಕೃತಿ ಅಲ್ಲ. ಹಾಗಾಗಿ ಆ ಹೇಳಿಕೆಗೆ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com