ಇದು ಕಾಂಗ್ರೆಸ್ ಪುನರುತ್ಥಾನ; ಎಸ್ ಎ ಡಿ ಮುಖಂಡರ ಅಹಂಕಾರಕ್ಕೆ ಮದ್ದು: ಸಿದ್ಧು

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಗೆಲುವನ್ನು ಪಕ್ಷದ ಪುನರುಜ್ಜೀವನ ಎಂದು ಶನಿವಾರ ಬಣ್ಣಿಸಿರುವ ಮಾಜಿ ಕ್ರಿಕೆಟರ್ ಮತ್ತು ರಾಜಕೀಯ ಮುಖಂಡ ನವಜೋತ್ ಸಿಂಗ್ ಸಿದ್ಧು,
ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿದ್ಧು
ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿದ್ಧು
ಚಂಡೀಘರ್: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಗೆಲುವನ್ನು ಪಕ್ಷದ ಪುನರುಜ್ಜೀವನ ಎಂದು ಶನಿವಾರ ಬಣ್ಣಿಸಿರುವ ಮಾಜಿ ಕ್ರಿಕೆಟರ್ ಮತ್ತು ರಾಜಕೀಯ ಮುಖಂಡ ನವಜೋತ್ ಸಿಂಗ್ ಸಿದ್ಧು, 'ರಾಜ್ಯ ಬೊಕ್ಕಸೆಯನ್ನು ವೈಯಕ್ತಿಕ ಆಸ್ತಿಯನ್ನಾಗಿಸಿಕೊಂಡಿದ್ದ ಎಸ್ ಎ ಡಿ ಪಕ್ಷದ ಮುಖಂಡರ ಅಹಂಕಾರದಿಂದ" ಅವರು ರಾಜ್ಯದಿಂದ ನಿರ್ಮೂಲನೆಯಾಗಿದ್ದಾರೆ ಎಂದಿದ್ದಾರೆ. 
"ಇದು ಕಾಂಗ್ರೆಸ್ ಪುನರುತ್ಥಾನ. ಇದು ಪ್ರಾರಂಭವಷ್ಟೇ. ಪಂಜಾಬಿನಿಂದ ಶಕ್ತಿ ಪಡೆದು ಇನ್ನಷ್ಟು ಪುನಶ್ಚೇತನಗೊಳ್ಳಲಿದೆ ಮತ್ತು ಅದು ದೇಶದಾದ್ಯಂತ ಪಸರಿಸಲಿದೆ" ಎಂದು ಅವರು ಹೇಳಿದ್ದಾರೆ. 
"(ಎಸ್ ಎ ಡಿ ಪಕ್ಷದ ಅಧ್ಯಕ್ಷ) ಸುಖಬೀರ್ ಸಿಂಗ್ ಬಾದಲ್ ಮತ್ತು ಅಕಾಲಿಗಳು ಪಂಜಾಬಿನಲ್ಲಿ ಸೋತಿರುವುದು ಏಕೆಂದರೆ ಅವರು ರಾಜಕೀಯವನ್ನು ಉದ್ದಿಮೆ ಮಾಡಿಕೊಂಡಿದ್ದರು. ಪಂಜಾಬ್ ಬೊಕ್ಕಸೆಯನ್ನು ತಮ್ಮ ಸ್ವತಂತದ ಆಸ್ತಿ ಎಂದುಕೊಂಡಿದ್ದರು ಅವರು. ಅವರಿಗೆ ಅಹಂಕಾರ ತುಂಬಿತ್ತು, ಆದರೆ ಅವರ ಕಾಲ ಇಂದು ಮುಗಿದಿದೆ" ಎಂದು ಕಳೆದ ವರ್ಷ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಸಿದ್ಧು ಹೇಳಿದ್ದಾರೆ. 
"ಅವರು (ಅಕಾಲಿ ದಳ-ಬಿಜೆಪಿ ಮೈತ್ರಿ) ಪಂಜಾಬ್ ಬೊಕ್ಕಸೆಯನ್ನು ಲೂಟಿ ಮಾಡಿದ್ದಾರೆ ಮತ್ತು ಆ ಬೊಕ್ಕಸೆಯನ್ನು ಮತ್ತೆ ತುಂಬಿಸಿ ಪಂಜಾಬ್ ನ ಗೌರವನ್ನು ಮರುಕಳಿಸುವ ಹೋರಾಟ ಇದು" ಎಂದು ಕೂಡ ಅವರು ಹೇಳಿದ್ದಾರೆ. 
ದೆಹಲಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಕೂಡ ವಾಗ್ದಾಳಿ ನಡೆಸಿರುವ ಅವರು "ಕೇಜ್ರಿವಾಲ್ ಆವರಿಗೆ ತಪ್ಪು ಆದ್ಯತೆಗಳಿದ್ದವು. ಇದು ಅವರಿಗೆ ಅತಿ ದೊಡ್ಡ ಸೋಲು. ಸತ್ಯಕ್ಕೆ ಸೋಲಿಲ್ಲ" ಎಂದಿದ್ದಾರೆ. 
ಈ ಗೆಲುವನ್ನು ಸಿದ್ದು ಪಕ್ಷದ ಕಾರ್ಯಕರ್ತರಿಗೆ ಅರ್ಪಿಸಿದ್ದಾರೆ. "ನಾನು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ವಚನ ನೀಡಿದ್ದೆ, ರಾಜ್ಯದಲ್ಲಿ ಪಕ್ಷದ ಪುನರುಜ್ಜೀವನಕ್ಕೆ ಕಷ್ಟ ಪಟ್ಟು ಕೆಲಸ ಮಾಡುತ್ತೇನೆಂದು ಮತ್ತು ಇತರರಿಗೆ ಉದಾಹರಣೆಯಾಗುತ್ತೇನೆಂದು" ಎಂದು ಕೂಡ ಸಿದ್ಧು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com