ಪಂಜಾಬ್ ಚುನಾವಣಾ ಫಲಿತಾಂಶ ನಿರಾಸೆ ತಂದಿದೆ: ಎಎಪಿ

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದೆ ಇರುವುದಕ್ಕೆ ನಿರಾಸೆಯಾಗಿದೆ ಎಂದಿರುವ ಆಮ್ ಆದ್ಮಿ ಪಕ್ಷ ಆದರೆ ಮುಖ್ಯ ವಿರೋಧ ಪಕ್ಷವಾಗಿ
ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್
ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್
ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದೆ ಇರುವುದಕ್ಕೆ ನಿರಾಸೆಯಾಗಿದೆ ಎಂದಿರುವ ಆಮ್ ಆದ್ಮಿ ಪಕ್ಷ ಆದರೆ ಮುಖ್ಯ ವಿರೋಧ ಪಕ್ಷವಾಗಿ ಹೊಮ್ಮಿರುವುದು ಕೂಡ ಸಾಧನೆ ಎಂದಿದೆ. 
"ಪಂಜಾಬಿನಲ್ಲಿ ಅಧಿಕಾರಕ್ಕೆ ಬರುವ ಭರವಸೆ ಹೊಂದಿದ್ದೆವು ನಾವು " ಎಂದಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅಶುತೋಷ್ "ನಮಗೆ ಫಲಿತಾಂಶ ನಿರಾಸೆ ತಂದಿದೆ" ಎಂದು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವತ್ತ ಮುನ್ನಡೆಯುತ್ತಿರುವ ಹಿನ್ನಲೆಯಲ್ಲಿ ಹೇಳಿದ್ದಾರೆ. 
"ಆದರೆ ನಮ್ಮದು ಹೊಸ ಪಕ್ಷ (ರಾಜ್ಯದಲ್ಲಿ). ಎರಡನೇ ಸ್ಥಾನದಲ್ಲಿ ಇರುವುದು ಕೂಡ ಉತ್ತಮ ಸಾಧನೆಯೇ" ಎಂದು ಅಶುತೋಷ್ ಹೇಳಿದ್ದು "ಇದನ್ನು ಕಡೆಗಣಿಸಬೇಡಿ" ಎಂದಿದ್ದಾರೆ. 
೧೧೭ ಕ್ಷೇತ್ರಗಳಲ್ಲಿ ೧೦೦ ಕಡೆ ಗೆಲ್ಲುವ ಆತ್ಮವಿಶ್ವಾಸದಿಂದ ಇದ್ದ ನಾವು ಈಗ ನಮ್ಮ ಅರಿಕೆಯಲ್ಲಿ ಎಲ್ಲಿ ತಪ್ಪಾಗಿದೆ ಎಂದು ತಿಳಿಯಲು ಎಎಪಿ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಕೂಡ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com