ವಿಮಾನನಿಲ್ದಾಣದಲ್ಲಿ ಮೊಹಮದ್ ಅಲಿ ಜೂನಿಯರ್ ಗೆ ಮತ್ತೆ ವಿಚಾರಣೆ

ಅಮೆರಿಕಾ ಬಾಕ್ಸಿಂಗ್ ದಂತಕತೆ ಮೊಹಮದ್ ಅಲಿ ಅವರ ಪುತ್ರ ಮೊಹಮದ್ ಅಲಿ ಜೂನಿಯರ್ ಅವರನ್ನು ಶುಕ್ರವಾರ ಅಪರಾಹ್ನ ವಿಮಾನ ಹತ್ತುವ ಮುಂಚೆ ಕೆಲ ಕಾಲ ತಡೆದು ವಿಚಾರಣೆ ನಡೆಸಲಾಗಿದೆ ಎಂದು
ಮೊಹಮದ್ ಅಲಿ ಜೂನಿಯರ್
ಮೊಹಮದ್ ಅಲಿ ಜೂನಿಯರ್
ವಾಷಿಂಗ್ಟನ್: ಅಮೆರಿಕಾ ಬಾಕ್ಸಿಂಗ್ ದಂತಕತೆ ಮೊಹಮದ್ ಅಲಿ ಅವರ ಪುತ್ರ ಮೊಹಮದ್ ಅಲಿ ಜೂನಿಯರ್ ಅವರನ್ನು ಶುಕ್ರವಾರ ಅಪರಾಹ್ನ ವಿಮಾನ ಹತ್ತುವ ಮುಂಚೆ ಕೆಲ ಕಾಲ ತಡೆದು ವಿಚಾರಣೆ ನಡೆಸಲಾಗಿದೆ ಎಂದು ಅವರ ವಕೀಲ ಹೇಳಿದ್ದಾರೆ. 
ಕಳೆದ ತಿಂಗಳು ಫ್ಲೋರಿಡಾ ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡ ಬಗ್ಗೆ ಮೊಹಮದ್ ಅಲಿ ಜೂನಿಯರ್ ಗೆ ಕಾಂಗ್ರೆಸ್ ಸದಸ್ಯರೊಂದಿಗೆ ಮಾತನಾಡಿದ್ದರು. ಇದಕ್ಕಾಗಿ ವಾಷಿಂಗ್ಟನ್ ಗೆ ಬಂದಿದ್ದ ಅವರು ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫ್ಲೋರಿಡಾಗೆ ತೆರಳಲು ಹೊರಟಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 
ಬೋರ್ಡಿಂಗ್ ಪಾಸ್ ಪಡೆಯಲು ಅವರು ಅಲ್ಲಿನ ಏಜೆಂಟ್ ಗೆತಮ್ಮ ಗುರುತಿನ ಚೀಟಿ ನೀಡಿದರು ಎಂದು ಅವರೊಂದಿಗೆ ತೆರಳುತ್ತಿದ್ದ ವಕೀಲ ಕ್ರಿಸ್ ಮ್ಯಾಂಚಿನಿ ಹೇಳಿದ್ದಾರೆ. ಕೂಡಲೇ ಏನೋ ತೊಂದರೆ ಇದೆ ಎಂದು ತಿಳಿಸಿದ ಏಜೆಂಟ್ ಹೋಮ್ಲ್ಯಾಂಡ್ ಭಾದ್ರತಾ ಇಲಾಖೆಗೆ ಕರೆ ಮಾಡಬೇಕೆಂದು ತಿಳಿಸಿದ್ದಾರೆ. ನಂತರ ಅಲಿ ಅವರ ಜನ್ಮ ದಿನಾಂಕ ಮತ್ತು ಸಾಮಾಜಿಕ ಭದ್ರತಾ ಸಂಖ್ಯೆ ಯನ್ನು ಕೇಳಿ ತಿಳಿದ ಭದ್ರತಾ ಏಜೆನ್ಸಿ, ಇಲ್ಲಿನಾಯ್ಸ್ ರಾಜ್ಯ ನೀಡಿರುವ ಗುರುತಿನ ಚೀಟಿ ವಿಮಾನ ಹಾರಾಟಕ್ಕೆ ಅನಧಿಕೃತ ಎಂದು ತಿಳಿಸಿದ್ದಾರೆ. 
"ಇದೆ ಗುರುತಿನ ಚೀಟಿ ಬಳಸಿ ಇಲ್ಲಿನಾಯ್ಸ್ ನಿಂದ ಅವರು ವಾಷಿಂಗ್ಟನ್ ಗೆ ಅವರು ಹಾರಿ ಬಂದದ್ದು. ಅದನ್ನು ಇಲ್ಲಿ ತಿರಸ್ಕರಿಸಲಾಯಿತು" ಎಂದು ಮ್ಯಾಂಚಿನಿ ಹೇಳಿದ್ದಾರೆ. 
ನಂತರ ಪಾಸ್ ಪೋರ್ಟ್ ತೋರಿಸಿದ ಮೇಲೆ ಅವರ ತಾಯಿಯೊಂದಿಗೆ ವಿಮಾನ ಏರಲು ಅವಕಾಶ ನೀಡಲಾಯಿತು ಎಂದು ಕೂಡ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com