ಭಾರತೀಯ-ಅಮೆರಿಕನ್ ಅಂಗಡಿ ಮುಗ್ಗಟ್ಟನ್ನು ದಹಿಸಲು ಪ್ರಯತ್ನಿಸಿದ ಅಮೆರಿಕ ಪ್ರಜೆ

ಮಾಲೀಕರು ಮುಸ್ಲಿಮರು ಎಂದು ತಿಳಿದು ಭಾರತೀಯ-ಅಮೆರಿಕನ್ ಒಡೆತನದ ಅಂಗಡಿಯನ್ನು ಸುಟ್ಟು ಹಾಕಲು ಅಮೆರಿಕಾದ ಫ್ಲೋರಿಡಾದ ನಾಗರಿಕನೊಬ್ಬ ಪ್ರಯತ್ನಿಸಿದ್ದ ಎಂದು ಅಧಿಕಾರಿಗಳು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಮಾಲೀಕರು ಮುಸ್ಲಿಮರು ಎಂದು ತಿಳಿದು ಭಾರತೀಯ-ಅಮೆರಿಕನ್ ಒಡೆತನದ ಅಂಗಡಿಯನ್ನು ಸುಟ್ಟು ಹಾಕಲು ಅಮೆರಿಕಾದ ಫ್ಲೋರಿಡಾದ ನಾಗರಿಕನೊಬ್ಬ ಪ್ರಯತ್ನಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. 
"ಅರಬ್ಬರನ್ನು ನಮ್ಮ ದೇಶದಿಂದ ಹೊರಗೆ ಓಡಿಸಬೇಕು" ಎಬುದನ್ನು ಬಯಸಿದ್ದೆ ಎಂದು ಅಧಿಕಾರಿಗಳಿಗೆ ಹೇಳಿರುವ ೬೪ ವರ್ಷದ ರಿಚರ್ಡ್ ಲಾಯ್ಡ್, ಶುಕ್ರವಾರ ರಾತ್ರಿ ಪೋರ್ಟ್ ಸೆಂಟ್ ಲೂಸಿ ಅಂಗಡಿಯ ಎದುರು ಕಸದ ಡಬ್ಬ ನೂಕಿ ಬೆಂಕಿ ಹಚ್ಚಿದ್ದಾನೆ ಎಂದು ಸೆಂಟ್ ಲೂಸಿ ಕಂಟ್ರಿ ಶೆರಿಫ್ ಕೆನ್ ಮಸ್ಕರಾ ಸುದ್ದಿ ಹೇಳಿಕೆಯನ್ನು ಫೇಸ್ಬುಕಿನಲ್ಲಿ ಬಿಡುಗಡೆ ಮಾಡಿದ್ದಾರೆ. 
ಬೆಂಕಿಯನ್ನು ಕೂಡಲೇ ನಂದಿಸಲಾಗಿದ್ದು ಮತ್ತು ಅಂಗಡಿ ಮುಚ್ಚಿತ್ತಾದ್ದರಿಂದ ಹೆಚ್ಚು ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಇದರ ಮಾಲೀಕರು ಮುಸ್ಲಿಮರು ಎಂದು ತಿಳಿದಿದ್ದೆ ಎಂದು ಲಾಯ್ಡ್ ತನಿಖಾದಿಗಾರಿಗಳಿಗೆ ತಿಳಿಸಿದ್ದು "ಅವರು ಮಧ್ಯ ಪ್ರಾಚ್ಯ ದೇಶಗಳಲ್ಲಿ ಮಾಡುತ್ತಿರುವ ಕೃತ್ಯ ನನಗೆ ಕೋಪ ತರಿಸಿದೆ" ಎಂದಿದ್ದಾರೆ. 
"ಮಾಲೀಕರು ಭಾರತೀಯ ಮೂಲದವರಾಗಿದ್ದು, ಲಾಯ್ಡ್ ಅವರನ್ನು ಅರಬ್ ನವರು ಎಂದು ತಿಳಿದದ್ದು ದುರದೃಷ್ಟಕರ" ಎಂದು ಮಸ್ಕರಾ ಹೇಳಿದ್ದಾರೆ. 
ರಾಜ್ಯ ಆಟಾರ್ನಿಯ ಕಚೇರಿಯಿಂದ ಲಾಯ್ಡ್ ಅವರ ಮಾನಸಿಕ ಸ್ಥಿತಿಯನ್ನು ಪರಿಶೀಲಿಸಲಾಗುವುದು ಮತ್ತು ಇದು ಜನಾಂಗೀಯ ದ್ವೇಷದ ಕೃತ್ಯವೇ ಎಂದು ಪತ್ತೆ ಹಚ್ಚಲಾಗುವುದು ಎಂದು ಮಸ್ಕರಾ ಹೇಳಿರುವುದಾಗಿ ಸಿ ಎನ್ ಎನ್ ವರದಿ ಮಾಡಿದೆ. 
ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದಾಗಿಲಿಂದಲೂ ಜನಾಂಗೀಯ ದ್ವೇಷದ ಪ್ರಕರಣಗಳು ಅಮೆರಿಕಾದಲ್ಲಿ ಹೆಚ್ಚಾಗಿದ್ದು, ಹೈದರಾಬಾದ್ ಮೂಲದ ಶ್ರೀನಿವಾಸ್ ಎಂಬುವವರು ಕನ್ಸಾಸ್ ನಲ್ಲಿ ಹತ್ಯೆ ಮಾಡಿದ್ದು, ಸೌತ್ ಕೆರೊಲಿನಾದಲ್ಲಿ ಮತ್ತೊಬ್ಬ ಭಾರತೀಯ ಹರ್ನಿಶ್ ಪಟೇಲ್ ಹತ್ಯೆಯಾದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com