ಮೋದಿ ಸುನಾಮಿ ಭಯ; ಇವಿಎಂ ಬೇಡಾ, ಮತಪತ್ರ ಬೇಕು: ಚು.ಆಯೋಗಕ್ಕೆ ಕೇಜ್ರಿವಾಲ್ ಪತ್ರ

ಇತ್ತೀಚಿಗೆ ನಡೆದ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಗೆಲುವಿನಿಂದ ಕಂಗೆಟ್ಟಿರುವ ದೆಹಲಿ...
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
ನವದೆಹಲಿ: ಇತ್ತೀಚಿಗೆ ನಡೆದ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಗೆಲುವಿನಿಂದ ಕಂಗೆಟ್ಟಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು, ಮುಂಬರುವ ದೆಹಲಿ ಮಹಾನಗರ ಪಾಲಿಕೆಗೆಳ ಚುನಾವಣೆಯಲ್ಲಿ ಇವಿಎಂ ವಿಧಾನದ ಬದಲು ಮತಪತ್ರ ವಿಧಾನವನ್ನೇ ಬಳಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಎವಿಎಂ ಮೆಷಿನ್​ಗಳಲ್ಲಿ ದೋಷವಿದೆ ಎಂದು ಆರೋಪಿಸಿದ್ದರು. ಅಲ್ಲದೆ ಮರು ಚುನಾವಣೆ ನಡೆಸಿ ಮತಪತ್ರಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೆ ಈಗ ದೆಹಲಿ ಸಿಎಂ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. 
ಮತ್ತೊಂದು ಕಡೆ ಮೋದಿ ಸುನಾಮಿಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಸಹ ಇವಿಎಂ ಬದಲು ಬ್ಯಾಲೆಟ್ ಪೇಪರ್​ಗಳನ್ನು ಬಳಕೆ ಮಾಡುವಂತೆ ಒತ್ತಾಯ ಹೇರಬೇಕು ಎಂದು ಕೇಜ್ರಿವಾಲ್​ಗೆ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಮಾಖೆನ್  ಅವರು ಪತ್ರ ಬರೆದಿದ್ದಾರೆ.
ಇಸಿ ಮುಖಸ್ಥ ಎಂಎಂ ಕುಟ್ಟಿ ಅವರಿಗೆ ಮುಂಬರುವ ದೆಹಲಿ ಪೌರಸಂಸ್ಥೆಗಳ ಚುನಾವಣೆಗೆಯನ್ನು ಮತಪತ್ರ ವಿಧಾನದ ಮೂಲಕ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವಂತೆ ಕೇಜ್ರಿವಾಲ್ ಸಲಹೆ ನೀಡಿದ್ದು, ಅರವಿಂದ ಕೇಜ್ರಿವಾಲ್ ಹಳೆಯ ಪದ್ಧತಿಯಾದ ಮತಪತ್ರ ವಿಧಾನಕ್ಕೆ ಒತ್ತಾಯ ಪಡಿಸಿರುವುದು ಮತದಾನದ ವಿಧಾನದ ಬಗ್ಗೆ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com