ಅಫ್ಘಾನಿಸ್ಥಾನ ಸೇನಾ ನೆಲೆ ಮೇಲೆ ಉಗ್ರದಾಳಿ; ೧೪ ಜನರ ಹತ್ಯೆ

ಆಫ್ಘಾನಿಸ್ಥಾನದ ಉರುಜ್ಗನ್ ಪ್ರಾಂತ್ಯದ ಸೇನಾ ನೆಲೆಯಲ್ಲಿ ನಡೆದ ಉಗ್ರ ದಾಳಿ ಮತ್ತು ನಂತರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಚಕಮಕಿಯಲ್ಲಿ ಮೂವರು ಯೋಧರು ಮತ್ತು ೧೧ ಜನ ಉಗ್ರರು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕಾಬುಲ್: ಆಫ್ಘಾನಿಸ್ಥಾನದ ಉರುಜ್ಗನ್ ಪ್ರಾಂತ್ಯದ ಸೇನಾ ನೆಲೆಯಲ್ಲಿ ನಡೆದ ಉಗ್ರ ದಾಳಿ ಮತ್ತು ನಂತರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಚಕಮಕಿಯಲ್ಲಿ ಮೂವರು ಯೋಧರು ಮತ್ತು ೧೧ ಜನ ಉಗ್ರರು ಹತ್ಯೆಯಾಗಿದ್ದಾರೆ ಎಂದು ಸೋಮವಾರ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
"ತಿರಿನ್ ಕೋಟ್ ಜಿಲ್ಲೆಯ ಸೇನಾ ನೆಲೆಯ ಮೇಲೆ ಶಸ್ತ್ರಸಜ್ಜಿತ ಹಲವು ಉಗ್ರರು ಭಾನುವಾರ ರಾತ್ರಿ ದಾಳಿ ನಡೆಸಿದರು" ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಹೇಳಿದ್ದಾರೆ. 
ಈ ಉಗ್ರರು ತಾಲಿಬಾನ್ ಭಯೋತ್ಪಾದಕ ಸಂಘಟನೆಗೆ ಸೇರಿದವರು ಎಂದು ಕೂಡ ಅವರು ತಿಳಿಸಿದ್ದಾರೆ. 
ಸೋಮವಾರ ಬೆಳಗಿನ ಜಾವ ಹೆಚ್ಚುವರಿ ಭದ್ರತಾ ಪಡೆ ಆಗಮಿಸುವವರೆಗೆ ಈ ಭಯೋತ್ಪಾದಕರು ಸೇನಾ ನೆಲೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು ಎಂದು ಕೂಡ ತಿಳಿಯಲಾಗಿದೆ. ಈ ದಾಳಿಯಲ್ಲಿ ಉಗ್ರರು ಕೆಲವು ಸೈನಿಕರನ್ನು ವಶಕ್ಕೆ ಪಡೆದಿದ್ದಾರೆ ಎಂದು ಕೂಡ ಅಧಿಕಾರಿ ಹೇಳಿದ್ದಾರೆ. 
"ಈ ನೆಲೆಯ ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚುವರಿ ಭದ್ರತಾ ಪಡೆ ಪ್ರರಾಂಭಿಸಿದ್ದು, ವಶಪಡಿಸಿಕೊಂಡಿರುವ ಯೋಧರನ್ನು ರಕ್ಷಿಸಲು ಶೋಧ ಕಾರ್ಯಾಚರಣೆ ಮುಂದುವರೆದಿದೆ" ಎಂದು ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com