ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಧ್ಯಪ್ರದೇಶ ಪ್ರಶ್ನೆಪತ್ರಿಕೆ ಬಯಲು; ಏಳು ಜನ ಪೊಲೀಸ್ ವಶಕ್ಕೆ

ಮಧ್ಯಪ್ರದೇಶ ಪ್ರಶ್ನೆಪತ್ರಿಕೆ ಬಯಲು ಪ್ರಕರಣದಲ್ಲಿ ಏಳು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ.
Published on
ಸತ್ನಾ: ಮಧ್ಯಪ್ರದೇಶ ಪ್ರಶ್ನೆಪತ್ರಿಕೆ ಬಯಲು ಪ್ರಕರಣದಲ್ಲಿ ಏಳು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ. 
"ಸತ್ನಾ ಜಿಲ್ಲೆಯ ಅಮರಪತನ್ ನಿಂದ ೯ ನೇ ಮತ್ತು ೧೧ ನೇ ತರಗತಿಯ ಪ್ರಶ್ನೆಪತ್ರಿಕೆಗಳು ಬಯಲಾಗಿದ್ದವು ಮತ್ತು ಈ ಪ್ರಕರಣದಲ್ಲಿ ಸೋಮವಾರ ಮತ್ತು ಮಂಗಳವಾರ ಸರಣಿ ದಾಳಿಗಳನ್ನು ನಡೆಸಿ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ" ಎಂದು ಸತ್ನಾ ಪೊಲೀಸ್ ಸೂಪರಿಂಟೆಂಡೆಂಟ್ ಮಿಥಿಲೇಶ್ ಶುಕ್ಲ ಹೇಳಿದ್ದಾರೆ. 
ಆಪಾದಿತರನ್ನು ವಿಚಾರಣೆಗೆ ಒಳಪಡಿಸಿದ್ದು ನಂತರವಷ್ಟೇ ಅವರಿಗೆ ಪ್ರಶ್ನೆಪತ್ರಿಕೆಗಳು ಸಿಕ್ಕಿದ್ದು ಹೇಗೆ ಎಂದು ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
ರಾಜ್ಯದಲ್ಲಿ ಪರೀಕ್ಷೆಗೂ ಮುಂಚೆತವಾಗಿ ೯ನೇ ಮತ್ತು ೧೧ನೇ ತರಗತಿಯ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಹೋಗಿದ್ದವು ಮತ್ತು ರಾಜ್ಯಸರ್ಕಾರ ಇದರಿಂದ ಪರೀಕ್ಷೆಗಳಿಗೆ ತಡೆ ಒಡ್ಡಿತ್ತು. 
ರದ್ದುಗೊಂಡ ಪರೀಕ್ಷೆಗಳನ್ನು ಏಪ್ರಿಲ್ ೩ ಕ್ಕೆ ಮರುನಿಗದಿಪಡಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com