ಸ್ವರಾಜ್ ಇಂಡಿಯಾಗೆ ಒಂದು ಸಾಮಾನ್ಯ ಚಿಹ್ನೆ ಕೊಡಲು ಬರುವುದಿಲ್ಲ: ಚುನಾವಣಾ ಆಯೋಗ

ಮಾನ್ಯತೆ ಪಡೆಯದ ಪಕ್ಷಕ್ಕೆ ಒಂದು ಸಾಮಾನ್ಯ ಚಿಹ್ನೆ ಕೊಡಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಬುಧವಾರ ದೆಹಲಿ ಉಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮಾನ್ಯತೆ ಪಡೆಯದ ಪಕ್ಷಕ್ಕೆ ಒಂದು ಸಾಮಾನ್ಯ ಚಿಹ್ನೆ ಕೊಡಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಬುಧವಾರ ದೆಹಲಿ ಉಚ್ಛ ನ್ಯಾಯಾಲಯಕ್ಕೆ ತಿಳಿಸಿದೆ. 
ಮುಂಬರುವ ದೆಹಲಿ ನಗರಸಭಾ ಚುನಾವಣೆಗೆ ಯೋಗೇಂದ್ರ ಯಾದವ್ ಮುನ್ನಡೆಸುತ್ತಿರುವ ಸ್ವರಾಜ್ ಇಂಡಿಯಾ ಪಕ್ಷಕ್ಕೆ ಒಂದು ಸಾಮಾನ್ಯ ಚಿಹ್ನೆ ನೀಡಲು ದೆಹಲಿ ಚುನಾವಣಾ ಆಯೋಗ ನಿರಾಕರಿಸಿರುವುದನ್ನು ಪ್ರಶ್ನಿಸಿರುವುದಕ್ಕೆ ವಾದ ವಿವಾದಗಳನ್ನು ಹೈಕೋರ್ಟ್ ಆಲಿಸಿತ್ತು. 
ನೊಂದಾಯಿತ ಆದರೆ ಮಾನ್ಯತೆ ಪಡೆಯದ ಪಕ್ಷಕ್ಕೆ ಒಂದು ಸಾಮಾನ್ಯ ಚಿಹ್ನೆಯನ್ನು ನೀಡುವ ಅಧಿಕಾರ ನಮಗಿಲ್ಲ ಎಂದು ದೆಹಲಿ ಚುನಾವಣಾ ಆಯೋಗದ ಅಧಿಕಾರಿ ಕೋರ್ಟ್ ಗೆ ತಿಳಿಸಿದ್ದಾರೆ. 
ಒಂದು ಪಕ್ಷಕ್ಕೆ ಸಾಮಾನ್ಯ ಚಿಹ್ನೆ ದೊರಕಬೇಕಾದರೆ ಅದು ೬% ಮತಗಳನ್ನು ಪಡೆದಿರಬೇಕು ಅಥವಾ ಕನಿಷ್ಠ ಇಬ್ಬರು ಶಾಸಕರನ್ನು ಹೊಂದಿರಬೇಕು ಎಂಬ ನಿಯಮವಿದೆ ಎಂದು ಅಧಿಕಾರಿ ಹೇಳಿದ್ದಾರೆ. 
ತಮ್ಮ ಪಕ್ಷಕ್ಕೆ ಒಂದು ಸಾಮಾನ್ಯ ಚಿಹ್ನೆ ದೊರಕದಿದ್ದರೆ ನಮ್ಮ ಅಭ್ಯರ್ಥಿಗಳನ್ನು ಸ್ವತಂತ್ರ ಅಭ್ಯರ್ಥಿಗಳೆಂದು ಪರಿಗಣಿಸಲಾಗುತ್ತದೆ ಎಂದು ಸ್ವರಾಜ್ ಇಂಡಿಯಾ ನ್ಯಾಯಾಧೀಶ ಬರ್ದಾರ್ ದುರ್ರೇಜ್ ಒಳಗೊಂಡ ನ್ಯಾಯಪೀಠಕ್ಕೆ ತಿಳಿಸಿದೆ. 
ಗುರುವಾರ ಕೋರ್ಟ್ ವಿಚಾರಣೆಯನ್ನು ಮುಂದುವರೆಸಲಿದೆ. ಏಪ್ರಿಲ್ ೨೨ ರಂದು ನಡೆಯುವ ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವರಾಜ್ ಇಂಡಿಯಾ ಸಿದ್ಧತೆ ನಡೆಸಿದೆ. 
ಚುನಾವಣಾ ಚಿಹ್ನೆ (ಮೀಸಲು ಮತ್ತು ಹಂಚಿಕೆ) (ತಿದ್ದುಪಡಿ) ಆದೇಶದ ಪ್ರಕಾರ ಮೊದಲ ಚುನಾವಣೆಯಲ್ಲಿ ಪಕ್ಷವೊಂದಕ್ಕೆ ಸ್ಪರ್ಧಿಸಲು ಎಲ್ಲಾ ಅಭ್ಯರ್ಥಿಗಳಿಗೆ ಸಾಮಾನ್ಯ ಚಿಹ್ನೆಯನ್ನು ನೀಡುವ ಅಧಿಕಾರ ಚುನಾವಣಾ ಆಯೋಗಕ್ಕಿದೆ ಎಂದು ಸ್ವರಾಜ್ ಇಂಡಿಯಾಯದ ವಕೀಲ ಅಹಸ್ ಕೋರ್ಟ್ ಗೆ ತಿಳಿಸಿದ್ದಾರೆ. 
ಸಾಮಾನ್ಯ ಚಿಹ್ನೆ ದೊರಕದಿದ್ದಕ್ಕೆ ಆಮ್ ಆದ್ಮಿ ಪಕ್ಷವನ್ನು ಸ್ವರಾಜ್ ಇಂಡಿಯಾ ದೂಷಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com