ಐದು ಟ್ರಕ್ ಸ್ಕ್ಯಾನರ್ ಗಳನ್ನು ಖರೀದಿಸಲು ಚಾಲನೆ: ಕೇಂದ್ರ ಸರ್ಕಾರ

ಗಡಿಯಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಅನುಷ್ಠಾನಗೊಳಿಸಲು ಐದು ಟ್ರಕ್ ಸ್ಕ್ಯಾನರ್ ಗಳನ್ನು ಖರೀದಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಗಡಿಯಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಅನುಷ್ಠಾನಗೊಳಿಸಲು ಐದು ಟ್ರಕ್ ಸ್ಕ್ಯಾನರ್ ಗಳನ್ನು ಖರೀದಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ. ಇವುಗಳನ್ನು ಪಂಜಾಬಿನ ಅತ್ತರಿ ಮತ್ತಿ ಭಾರತ-ಪಾಕಿಸ್ತಾನ ಗಡಿಗಳಲ್ಲಿ ನಿಯೋಜಿಸಲಾಗುವುದು ಎಂದು ತಿಳಿಯಲಾಗಿದೆ. 
ಲಿಖಿತ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರೇನ್ ರಿಜಿಜು, ಈ ಸ್ಕ್ಯಾನರ್ ಗಳನ್ನು ಜಮ್ಮು ಕಾಶ್ಮೀರದ ನಿಯಂತ್ರಣ ಗಡಿಯಲ್ಲಿರುವ ಉರಿ-ಇಸ್ಲಾಮಾಬಾದ್, ಪೂಂಚ್-ಚಕನ್-ದ-ಭಾಗ್ ಚೆಕ್ ಪೋಸ್ಟ್ ಗಳು, ಭಾರತ-ನೇಪಾಳ ಗಡಿಯಲ್ಲಿನ ರಾಕ್ಸೌಲ್ ಗಡಿ ಮತ್ತು ಭಾರತ-ಬಾಂಗ್ಲಾದೇಶದ ಪೆಟ್ರಾಪೋಲ್ ಗಡಿಯಲ್ಲಿ ಕೂಡ ನಿಯೋಜಿಸುವುದಾಗಿ ತಿಳಿಸಿದ್ದಾರೆ. 
"ಈ ಸ್ಕ್ಯಾನರ್ ಗಳನ್ನು ಕೊಳ್ಳಲು ಸರ್ಕಾರ ಜಾಗತಿಕ ಟೆಂಡರ್ ಕರೆದಿದೆ. ಇದಕ್ಕಾಗಿ ರಾಜ್ಯ ಸರ್ಕಾರಗಳು ಮತ್ತಿತರ ಏಜೆನ್ಸಿಗಳಿಂದ ಪರವಾನಗಿಯನ್ನು ಪಡೆಯಲು ಚಾಲನೆ ನೀಡಲಾಗಿದೆ" ಎಂದು ಸಚಿವರು ಹೇಳಿದ್ದಾರೆ. 
ರಾಷ್ಟ್ರೀಯ ಭದ್ರತೆ ಮತ್ತು ವಾಣಿಜ್ಯ ಹಿತಾಸಕ್ತಿಯ ವಿಷಯಗಳಿಂದ ಹೆಚ್ಚಿನ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ. 
ಮಾರ್ಚ್ ೧ ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ತೆರಳುತ್ತಿದ್ದ ಟ್ರಕ್ ಒಂದನ್ನು ಉರಿ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಂಡಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾರಿ ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com