ಕಾಶ್ಮೀರದ ಗುಂಡಿನ ಕಾಳಗದಲ್ಲಿ ಯುವಕನ ಸಾವು

ಜಮ್ಮು ಮತ್ತು ಕಾಶ್ಮೀರದ ಬುಡಗಾಂ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ, ಯುವಕನೊಬ್ಬನಿಗೆ ಗುಂಡು ತಗಲಿ ಸಾವನ್ನಪ್ಪಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುಡಗಾಂ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ, ಯುವಕನೊಬ್ಬನಿಗೆ ಗುಂಡು ತಗಲಿ ಸಾವನ್ನಪ್ಪಿದ್ದಾರೆ. 
"ಈ ಗುಂಡಿನ ಕಾಳಗ ನಡೆಯುತ್ತಿರುವ ಪ್ರದೇಶದ ಬಳಿಯಿರುವ ದರ್ಭಗ್ ಗ್ರಾಮದ ಬಳಿ ಗುಂಡು ಹೊಡೆದಿದ್ದರಿಂದ ಈ ಯುವಕ ಮೃತಪಟ್ಟಿದ್ದಾರೆ ಮತ್ತು ಅವರನ್ನು ಜಾಹಿದ್ ರಶೀದ್ ಘನೈ ಎಂದು ಗುರುತಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 
"ಗುಂಡು ತಗುಲಿದ ನಂತರ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ನಂತರ ಅವರು ಮೃತಪಟ್ಟಿದ್ದಾರೆ" ಎಂದು ಅವರು ಹೇಳಿದ್ದಾರೆ. 
ಈ ಗುಂಡಿನ ಕಾಳಗದಲ್ಲಿ ಯುವಕನಿಗೆ ಗುಂಡು ತಗಲಿದ್ದು ಹೇಗೆ ಎಂಬ ಪ್ರಶ್ನೆಗೆ, ಈ ವೇಳೆಯಲ್ಲಿ ಆ ಪ್ರದೇಶದಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು ಎಂದು ಅಧಿಕಾರಿ ಹೇಳಿದ್ದಾರೆ. 
ಪ್ರತಿಭಟನಾ ನಿರತ ಯುವಕರು ಸಿ ಆರ್ ಪಿ ಎಫ್ ಅರೆ ಮಿಲಿಟರಿ ವಾಹನಗಳ ಮೇಲೆ ಕಲ್ಲುಗಳನ್ನು ಎಸೆದಿದ್ದಾಗಿಯೂ ಅವರು ಹೇಳಿದ್ದಾರೆ. ಈ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಗಳ ಬಲವನ್ನು ಹೆಚ್ಚಿಸಲು ಸಿ ಆರ್ ಪಿ ಎಫ್ ಅರೆ ಮಿಲಿಟರಿ ಪಡೆ ಧಾವಿಸುತ್ತಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com