ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯ ಮುಖಂಡ ದತ್ತಾತ್ರೇಯ ಹೊಸಬಾಳೆ
ಪ್ರಧಾನ ಸುದ್ದಿ
ಅಯೋಧ್ಯ ರಾಮಮಂದಿರ ಕುರಿತು ಧರ್ಮ ಸಂಸದ್ ನೀಡುವ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ: ಆರ್ ಎಸ್ ಎಸ್
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಬಗ್ಗೆ 'ಧರ್ಮ ಸಂಸದ್' ನಿರ್ಣಯ ತೆಗೆದುಕೊಳ್ಳಲಿದೆ ಎಂದಿರವ ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯ ಮುಖಂಡ ದತ್ತಾತ್ರೇಯ ಹೊಸಬಾಳೆ,
ಪಾಟ್ನಾ: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಬಗ್ಗೆ 'ಧರ್ಮ ಸಂಸದ್' ನಿರ್ಣಯ ತೆಗೆದುಕೊಳ್ಳಲಿದೆ ಎಂದಿರವ ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯ ಮುಖಂಡ ದತ್ತಾತ್ರೇಯ ಹೊಸಬಾಳೆ, ಸಂಘ (ಆರ್ ಎಸ್ ಎಸ್) ಅದನ್ನು ಒಪ್ಪಿಕೊಂಡು ಅದರ ಮೇಲೆ ಮುಂದಿನ ಹೆಜ್ಜೆ ಇಡಲಿದೆ ಎಂದಿದ್ದಾರೆ.
"ರಾಮ ಮಂದಿರ ಕಟ್ಟುವ ಬಗ್ಗೆ ಧರ್ಮ ಸಂಸದ್ ಯಾವ ನಿರ್ಣಯ ಕೈಗೊಳ್ಳುತ್ತದೆಯೋ ಆರ್ ಎಸ್ ಎಸ್ ಅದನ್ನು ಒಪ್ಪಿಕೊಂಡು, ಅದನ್ನು ಅನುಷ್ಠಾನಗೊಳಿಸಲಿದೆ" ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ನಿಕಟವರ್ತಿ ಎನ್ನಲಾಗುವ ದತ್ತಾತ್ರೇಯ ಬಿಹಾರದ ಔರಂಗಾಬಾದ್ ನಲ್ಲಿ ಹೇಳಿದ್ದಾರೆ.
ಈಗ ಭಾಬ್ರಿ ಮಸೀದಿ ಧ್ವಂಸವಾಗಿರುವ ಜಾಗದಲ್ಲಿ ಭವ್ಯ ರಾಮ ಮಂದಿರ ಕಟ್ಟುವ ಕೆಲಸ ಹಿಂದುಗಳಿಗೆ ಭಾವನಾತ್ಮಕ ವಿಷಯ ಎಂದು ಕೂಡ ಅವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ