ಜಮ್ಮು-ಕಾಶ್ಮೀರ: ಹತ್ಯೆ, ದರೋಡೆಗಳ ತಡೆಗೆ ಸೇನೆಯಿಂದ ಬೃಹತ್ ಪ್ರಮಾಣದಲ್ಲಿ ಕೂಂಬಿಂಗ್ ಕಾರ್ಯಾಚರಣೆ

ದಕ್ಷಿಣ ಕಾಶ್ಮೀರದಲ್ಲಿ ಬ್ಯಾಂಕ್ ದರೋಡೆ ಹಾಗೂ ಸರಣಿ ಹತ್ಯೆಗಳು ನಡೆದಿರುವ ಬೆನ್ನಲ್ಲೇ ಭಾರತೀಯ ಸೇನೆ ಬೃಹತ್ ಪ್ರಮಾಣದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದೆ.
ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಜಮ್ಮು: ದಕ್ಷಿಣ ಕಾಶ್ಮೀರದಲ್ಲಿ ಬ್ಯಾಂಕ್ ದರೋಡೆ ಹಾಗೂ ಸರಣಿ ಹತ್ಯೆಗಳು ನಡೆದಿರುವ ಬೆನ್ನಲ್ಲೇ ಭಾರತೀಯ ಸೇನೆ ಬೃಹತ್ ಪ್ರಮಾಣದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದೆ. 
ಕೂಂಬಿಂಗ್ ಕಾರ್ಯಾಚರಣೆ ನಿಯಮಿತ ಕಾರ್ಯಾಚರಣೆಯಾಗಿದ್ದು, ಹೊಸದಾಗಿ ಏನೂ ಮಾಡುತ್ತಿಲ್ಲ. ಕೆಲವು ದಿನಗಳ ಹಿಂದೆ ಬ್ಯಾಂಕ್ ನ್ನು ದರೋಡೆ ಮಾಡಲಾಗಿತ್ತು. ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. ಆದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ವರದಿಗಾರರಿಗೆ ಸ್ಪಷ್ಟನೆ ನೀಡಿದ್ದಾರೆ. 
ಇನ್ನು ಇದೇ ವೇಳೆ ಪಾಕಿಸ್ತಾನ ಭಾರತೀಯ ಯೋಧರ ಶಿರಚ್ಛೆಧ ಮಾಡಿರುವ ಪ್ರಕರಣದ ಬಗ್ಗೆಯೂ ಜನರಲ್ ಬಿಪಿನ್ ರಾವತ್ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನದ ಭಯೋತ್ಪಾದಕರು ಒಳನುಸುಳದಂತೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. 
ಬೇಸಿಗೆ ಪ್ರಾರಂಭವಾಗಿದ್ದು ಹಿಮ ಕರಗುತ್ತಿದೆ, ಭಯೋತ್ಪಾದಕರು ಒಳನುಸುಳಲು ಯತ್ನಿಸುತ್ತಿದ್ದಾರೆ. ಆದರೆ ನಾವು ಒಳನುಸುಳುವಿಕೆಯನ್ನು ತಡೆಗಟ್ಟಲು ಕ್ರಮಗಳನ್ನು ಹೊಂದಿದ್ದೇವೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com