ಸೇನೆಗೆ ಬಾಕಿ ರಕ್ಷಣಾ ವೆಚ್ಚ ಬಿಡುಗಡೆಯಾಗುತ್ತಿಲ್ಲ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ರಕ್ಷಣಾ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಶೀಘ್ರದಲ್ಲೇ ರಾಷ್ಟ್ರೀಯ ಸೇನಾ ತಂತ್ರಗಾರಿಕೆ ಮತ್ತು ಭದ್ರತಾ....
ಬಿಪಿನ್ ರಾವತ್
ಬಿಪಿನ್ ರಾವತ್
ನವದೆಹಲಿ: ರಕ್ಷಣಾ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಶೀಘ್ರದಲ್ಲೇ ರಾಷ್ಟ್ರೀಯ ಸೇನಾ ತಂತ್ರಗಾರಿಕೆ ಮತ್ತು ಭದ್ರತಾ ಚೌಕಟ್ಟನ್ನು ಅಂತಿಮಗೊಳಿಸಲಾಗುವುದು ಎಂದು ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಗುರುವಾರ ಹೇಳಿದ್ದಾರೆ.
ರಕ್ಷಣಾ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿದ ಬಿಪಿನ್ ರಾವತ್ ಅವರು, ರಕ್ಷಣಾ ಖರ್ಚು ದೇಶದಲ್ಲಿ ಅನೇಕರಿಗೆ ಹೊರೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಅಲ್ಲದೆ ಸೇನೆಗೆ ಬರಬೇಕಾದ ಬಾಕಿ ವೆಚ್ಚ ಬಿಡುಗಡೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.
ರಕ್ಷಣಾ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾವನ್ನು ಉದಾಹರಣೆಯಾಗಿ ನೀಡಿದ ಸೇನಾ ಮುಖ್ಯಸ್ಥರು, ಆರ್ಥಿಕ ಬೆಳವಣಿಗೆ ಮತ್ತು ಶಶಸ್ತ್ರ ಪಡೆಗಳ ಶಕ್ತಿ ಎರಡೂ ಪ್ರಬಲವಾಗಿದ್ದಾಗ ಮಾತ್ರ ಭಾರತದ ನೈಜ ಸಾಮರ್ಥ್ಯವನ್ನು ತೋರಿಸಲು ಸಾಧ್ಯ ಎಂದು ಒತ್ತಿ ಹೇಳಿದ್ದಾರೆ.
ಪಶ್ಚಿಮ ಮತ್ತು ಉತ್ತರದ ಗಡಿಯುದ್ದಕ್ಕೂ ನೆರೆಯ ಪಾಕಿಸ್ತಾನ ಮತ್ತು ಚೀನಾವನ್ನು ಎದುರಿಸಲು ಭಾರತ ಹೊಸ ಸ್ನೇಹಿತರನ್ನು ಮತ್ತು ಮಿತ್ರರಾಷ್ಟ್ರಗಳನ್ನು ನೋಡಿಕೊಳ್ಳಬೇಕು ಎಂದು ಬಿಪಿನ್ ರಾವತ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com