ವಿಚ್ಛೇದಿತ ಪತ್ನಿ ದುಡಿಯುತ್ತಿದ್ದರೆ ಜೀವನಾಂಶ ಇಲ್ಲ: ಆಂಧ್ರ ಹೈಕೋರ್ಟ್

ವಿಚ್ಛೇದಿತ ಪತ್ನಿ ದುಡಿಯುತ್ತಿದ್ದರೆ ಆಕೆಗೆ ಪತಿ ಜೀವನಾಂಶ ನೀಡಬೇಕಿಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಆಂಧ್ರ ಹೈಕೋರ್ಟ್
ಆಂಧ್ರ ಹೈಕೋರ್ಟ್
ಹೈದರಾಬಾದ್: ವಿಚ್ಛೇದಿತ ಪತ್ನಿ ದುಡಿಯುತ್ತಿದ್ದರೆ ಆಕೆಗೆ ಪತಿ ಜೀವನಾಂಶ ನೀಡಬೇಕಿಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 
ವಿಚ್ಛೇದನ ಪಡೆದಿದ್ದ ಮಹಿಳೆಯೊಬ್ಬರಿಗೆ ಆಕೆ ದುಡಿದು ಆದಾಯ ಗಳಿಸುತ್ತಿದ್ದ ಹೊರತಾಗಿಯೂ ವಿಚ್ಛೇದಿತ ಪತಿ ಜೀವನಾಂಶ ನೀಡಬೇಕೆಂಬ ಆಂಧ್ರಪ್ರದೇಶದ ಸ್ಥಳೀಯ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿರುವ ಆಂಧ್ರಪ್ರದೇಶ ಹೈಕೋರ್ಟ್, ವಿಚ್ಛೇದಿತ ಪತ್ನಿ ದುಡಿದು ಆದಾಯ ಗಳಿಸುತ್ತಿದ್ದರೆ ವಿಚ್ಛೇದಿತ ಪತ್ನಿ ಜೀವನಾಂಶ ನೀಡಬೇಕಿಲ್ಲ ಎಂದು ಮಹತ್ವದ ಆದೇಶ ನೀಡಿದೆ. 
"ವಿವಾಹವಾಗಿ 5 ದಿನಗಳು ಮಾತ್ರ ಸಂತೋಷವಾಗಿದ್ದೆವು, ನಂತರದ ದಿನಗಳಲ್ಲಿ ನನ್ನ ಬಗ್ಗೆ ಅನುಮಾನ ವ್ಯಕ್ತಪಡಿಸತೊಡಗಿದರು. ಅಷ್ಟೇ ಅಲ್ಲದೇ ಹೆಚ್ಚು ವರದಕ್ಷಿಣೆ ನೀಡಲು ಸಿದ್ಧವಿದ್ದ ಮತ್ತೊಬ್ಬರನ್ನು ವಿವಾಹವಾಗಲು ನನಗೆ ಕಿರುಕುಳ ನೀಡಿ, ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದ್ದರು. ನನಗೆ ಜೀವನ ನಡೆಸಲು ಆಧಾರವಿಲ್ಲ. ನನ್ನ ಪತಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು 15,000 ವೇತನ ಪಡೆಯುತ್ತಿದ್ದಾರೆ. ಆದ್ದರಿಂದ ನನಗೆ 10000 ರೂ ಜೀವನಾಂಶ ನೀಡುವಂತೆ ಆದೇಶಿಸಬೇಕು" ಎಂದು ಮಹಿಳೆಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಆಕೆಯ ಆರೋಪಗಳನ್ನು ನಿರಾಕರಿಸಿದ್ದ ವ್ಯಕ್ತಿ "ನನ್ನ ಪತ್ನಿಗೆ ಈ ವಿವಾಹ ಇಷ್ಟವಿರಲಿಲ್ಲ. ಆಕೆ ಮತ್ತೊಬ್ಬರನ್ನು ಪ್ರೀತಿಸುತ್ತಿದ್ದಳು ಪ್ರತಿದಿನವೂ ಆ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಳು, ಆಕೆ ದುಡಿಯುತ್ತಿರುವುದರಿಂದ ಜೀವನಾಂಶಕ್ಕೆ ಅರ್ಹಳಲ್ಲ" ಎಂದು ವಾದಿಸಿದ್ದರು. 
ವಿಚಾರಣೆ ನಡೆಸಿದ್ದ ಸ್ಥಳೀಯ ನ್ಯಾಯಾಲಯ ತಿಂಗಳಿಗೆ 4,000 ಸಾವಿರ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಆದರೆ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಯ ಪರವಾಗಿ ಕೋರ್ಟ್ ಆದೇಶ ನೀಡಿದ್ದು,  ಈ ಪ್ರಕರಣದಲ್ಲಿ ವಿಚ್ಛೇದನ ಪಡೆದಿರುವ ಪತ್ನಿಗೆ ತಿಂಗಳಿಗೆ 20,000 ರೂ ವೇತನ ಸಿಗುತ್ತಿದೆ. ಆದ್ದರಿಂದ ವಿಚ್ಛೇದಿತ ಪತ್ನಿ ದುಡಿಯುತ್ತಿದ್ದರೆ ಆಕೆಗೆ ಪತಿ ಜೀವನಾಂಶ ನೀಡಬೇಕಿಲ್ಲ ಎಂಬ ಆದೇಶ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com