ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನ್ಯಾಯಾಧೀಶ ಕರ್ಣನ್

ಸುಪ್ರೀಂ ಕೋರ್ಟ್ ಆದೇಶಿಸಿದ್ದ ಆರು ತಿಂಗಳ ಜೈಲು ಸಜೆಯ ತೀರ್ಪಿನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ, ಆದೇಶವನ್ನು ಹಿಂತೆಗುದುಕೊಳ್ಳುವಂತೆ ಕೊಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ...
ಕೊಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಸಿ ಎಸ್ ಕರ್ಣನ್
ಕೊಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಸಿ ಎಸ್ ಕರ್ಣನ್
ಸುಪ್ರೀಂ ಕೋರ್ಟ್ ಆದೇಶಿಸಿದ್ದ ಆರು ತಿಂಗಳ ಜೈಲು ಸಜೆಯ ತೀರ್ಪಿನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ, ಆದೇಶವನ್ನು ಹಿಂತೆಗುದುಕೊಳ್ಳುವಂತೆ ಕೊಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಸಿ ಎಸ್ ಕರ್ಣನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮಂಗಳಾವರ ಸುಪ್ರೀಂ ಕೋರ್ಟ್, ಕೋಲ್ಕತ್ತಾದ ವಿವಾದಾತ್ಮಕ ನಾಯಾಧೀಶರಿಗೆ ಆರು ತಿಂಗಳ ಸಜೆ ವಿಧಿಸಿತ್ತು ಮತ್ತು ಕೂಡಲೇ ಕರ್ಣನ್ ಅವರನ್ನು ಬಂಧಿಸಲು ಸೂಚಿಸಿತ್ತು. ನ್ಯಾಯಾಲಯ, ನ್ಯಾಯಾಂಗ ವಿಧಾನವನ್ನು ನಿಂದಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜೆ ಎಸ್ ಖೇಕರ್ ನೇತೃತ್ವದ ಪೀಠ ಹೇಳಿತ್ತು. 
ನ್ಯಾಯಾಂಗ ನಿಂದನೆಯ ಆರೋಪದ ಮೇಲೆ, ಕಾರ್ಯನಿರತ ಹೈಕೋರ್ಟ್ ನ್ಯಾಯಾಧೀಶರೊಬ್ಬರನ್ನು ಸುಪ್ರೀಂ ಕೋರ್ಟ್ ಜೈಲಿಗೆ ಕಳುಹಿಸುತ್ತಿರುವುದು ಇದೆ ಮೊದಲು. ಈ ಆದೇಶ ನೀಡಿದ ಪೀಠದಲ್ಲಿ ನ್ಯಾಯಾಧೀಶರಾದ ದೀಪಕ್ ಮಿಶ್ರ, ಜೆ ಚೆಲಮೇಶ್ವರ್, ರಂಜಾನ್ ಗೊಗೋಯ್, ಎಂ ಬಿ ಲೋಕೂರ್, ಪಿ ಸಿ ಗೋಸ್ ಮತ್ತು ಕುರಿಯನ್ ಜೋಸೆಫ್ ಕೂಡ ಇದ್ದರು. ಈ ಪೀಠ ಆರು ತಿಂಗಳ ಜೈಲು ಸಜೆಯ ತೀರ್ಪನ್ನು ಒಮ್ಮತವಾಗಿ ನೀಡಿತ್ತು. 
ನ್ಯಾಯಾಧೀಶ ಕರ್ಣನ್ ಅವರ ಅರ್ಜಿಯನ್ನು ಅಪೆಕ್ಸ್ ನ್ಯಾಯಾಲಯ ಸೋಮವಾರ ಆಲಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com