ಪರಿಷತ್​ಗೆ ನಾಮನಿರ್ದೇಶನ: ಇಬ್ಬರಿಗೆ ಒಪ್ಪಿಗೆ, ಸಿ.ಎಂ.ಲಿಂಗಪ್ಪ ಹೆಸರಿಗೆ ರಾಜ್ಯಪಾಲರ ಆಕ್ಷೇಪ

ವಿಧಾನ ಪರಿಷತ್ ಗೆ ಮೂವರ ಹೆಸರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರ್ಕಾರ ಕಳುಹಿಸಿದ್ದ ಶಿಫಾರಸು ಪಟ್ಟಿಯಲ್ಲಿ...
ರಾಜ್ಯಪಾಲ ವಜುಭಾಯಿ ವಾಲಾ
ರಾಜ್ಯಪಾಲ ವಜುಭಾಯಿ ವಾಲಾ
ಬೆಂಗಳೂರು: ವಿಧಾನ ಪರಿಷತ್ ಗೆ ಮೂವರ ಹೆಸರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರ್ಕಾರ ಕಳುಹಿಸಿದ್ದ ಶಿಫಾರಸು ಪಟ್ಟಿಯಲ್ಲಿ ಇಬ್ಬರ ಹೆಸರನ್ನು ರಾಜ್ಯಪಾಲರು ಒಪ್ಪಿದ್ದು, ಒಬ್ಬರ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಖಂಡರಾದ ಮೋಹನ್ ಕೊಂಡಜ್ಜಿ, ಸಿಎಂ ಲಿಂಗಪ್ಪ ಹಾಗೂ ಮಾಜಿ ಮೇಯರ್ ಪಿಆರ್ ರಮೇಶ್ ಅವರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಶಿಫಾರಸು ಮಾಡಿದ್ದರು. ಈ ಪೈಕಿ ಮೋಹನ್ ಕೊಂಡಜ್ಜಿ ಹಾಗೂ ಪಿಆರ್ ರಮೇಶ್ ಹೆಸರಿಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಶಿಕ್ಷಣ, ಸಮಾಜ ಸೇವೆ ಕೋಟಾದಲ್ಲಿ ಸಿಎಂ ಲಿಂಗಪ್ಪ ಅವರನ್ನು ವಿಧಾನ ಪರಿಷತ್ ಗೆ ನಾಮ ನಿರ್ದೇಶನ ಮಾಡಲು ನಿರಾಕರಿಸಿದ್ದಾರೆ.
ಸಿಎಂ ಲಿಂಗಪ್ಪ ಅವರು ಶಿಕ್ಷಣ ಮತ್ತು ಸಮಾಜ ಸೇವೆ ಕೋಟಾದಲ್ಲಿ ಬರುವುದಿಲ್ಲ ಎಂದಿರುವ ರಾಜ್ಯಪಾಲರು, ಸ್ಪಷ್ಟನೆ ಕೋರಿ ಹಾಗೂ ಅವರ ಹೆಸರನ್ನು ಮರು ಪರಿಶೀಲನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com