ಗಡಿ ನಿಯಂತ್ರಣ ರೇಖೆಯ ಬಳಿ ನೆಲಬಾಂಬ್ ಸ್ಫೋಟ; ಸೈನಿಕನಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಆಕಸ್ಮಿಕವಾಗಿ ನೆಲಬಾಂಬ್ ತುಳಿದು ಸ್ಫೋಟಗೊಂಡಿದ್ದರಿಂದ ಸೈನಿಕನೊಬ್ಬನಿಗೆ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ಶನಿವಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಆಕಸ್ಮಿಕವಾಗಿ ನೆಲಬಾಂಬ್ ತುಳಿದು ಸ್ಫೋಟಗೊಂಡಿದ್ದರಿಂದ ಸೈನಿಕನೊಬ್ಬನಿಗೆ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ. 
ಪೂಂಚ್ ಜಿಲ್ಲೆಯ ಮೆಂಧಾರ್ ಸೆಕ್ಟರ್ ಬಳಿ ಗಡಿ ಗಸ್ತು ಕಾಯುವಾದ ಶುಕ್ರವಾರ ರಾತ್ರಿ ಈ ಸ್ಫೋಟ ಸಂಭವಿಸಿದೆ ಎಂದು ಭದ್ರತಾ ಇಲಾಖೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೀಶ್ ಮೆಹ್ತಾ ಹೇಳಿದ್ದಾರೆ. 
"ಮಳೆಯಿಂದ ಆ ನೆಲಬಾಂಬ್ ಸರಿದಿತ್ತು. ಸೈನಿಕ ನೆಲಬಾಂಬ್ ನಿಂದ ರಕ್ಷಿಸುವ ಷೂ ಧರಿಸಿದ್ದರು, ಹಿಮ್ಮಡಿಗೆ ಪೆಟ್ಟಾಗಿದೆ" ಎಂದು ವಕ್ತಾರ ಹೇಳಿದ್ದಾರೆ. 
ಗಾಯಗೊಂಡ ಸೈನಿಕನನ್ನು ಉಧಂಪುರ್ ಕಮಾಂಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 
ಗಡಿಯಲ್ಲಿ ನುಸುಳಿವಿಕೆ ಹೆಚ್ಚಿರುವ ಸ್ಥಳಗಳಲ್ಲಿ ಅದಕ್ಕೆ ತಡೆ ಹಾಕಲು ಸೇನೆ ನೆಲಬಾಂಬ್ ಗಳನ್ನು ಹುದುಗಿಸಿಟ್ಟರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com