ಕಿರಿಯ ವೈದ್ಯರ ಮುಷ್ಕರ; ಪಾಟ್ನಾ ಆಸ್ಪತ್ರೆಯಲ್ಲಿ ಏಳು ರೋಗಿಗಳ ಸಾವು
ನೆನ್ನೆ ಮಧ್ಯರಾತ್ರಿಯಿಂದ ಕಿರಿಯ ವೈದ್ಯರು ಹೊಸದಾಗಿ ಮುಷ್ಕರ ಪ್ರಾರಂಭಿಸಿರುವುದರಿಂದ, ಚಿಕಿತ್ಸೆಗೆ ಸಿಬ್ಬಂದಿ ಕೊರೆತೆಯಿಂದಾಗಿ ಪಾಟ್ನಾ ವೈದ್ಯಕೀಯ ಕಾಲೇಜು (ಪಿಎಂಸಿಎಚ್) ಮತ್ತು ಆಸ್ಪತೆಯಲ್ಲಿ
ಪಾಟ್ನಾ: ನೆನ್ನೆ ಮಧ್ಯರಾತ್ರಿಯಿಂದ ಕಿರಿಯ ವೈದ್ಯರು ಹೊಸದಾಗಿ ಮುಷ್ಕರ ಪ್ರಾರಂಭಿಸಿರುವುದರಿಂದ, ಚಿಕಿತ್ಸೆಗೆ ಸಿಬ್ಬಂದಿ ಕೊರೆತೆಯಿಂದಾಗಿ ಪಾಟ್ನಾ ವೈದ್ಯಕೀಯ ಕಾಲೇಜು (ಪಿಎಂಸಿಎಚ್) ಮತ್ತು ಆಸ್ಪತೆಯಲ್ಲಿ ಕನಿಷ್ಠ ೭ ಜನ ರೋಗಿಗಳು ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ತಮ್ಮ ಮೇಲೆ ಲಾಠಿ ಚಾರ್ಜ್ ಮಾಡಿ ಹಲವರ ಗಾಯಕ್ಕೆ ಕಾರಣವಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದ ಹೊರತು, ೨೪ ಘಂಟೆಗಳ ಕಾಲವು ಕೆಲಸದಿಂದ ಹೊರಗುಳಿಯುವುದಾಗಿ ವೈದ್ಯರು ಬೆದರಿಕೆಯೊಡ್ಡಿದ್ದಾರೆ.
"ಪಿಎಂಸಿಎಚ್ ಕಿರಿಯ ವೈದ್ಯರು ಬುಧವಾರ ಬೆಳಗ್ಗೆಯಿಂದ ಮುಷ್ಕರ ಹೂಡಿರುವುದರಿಂದ ತುರ್ತು ನಿಗಾ ಘಟಕ ಮತ್ತು ಒಪಿಡಿ ಸೇವೆಗಳಿಗೆ ವ್ಯತ್ಯಯವಾಗಿದ್ದು, ಚಿಕಿತ್ಸೆಯ ಅಭಾವದಿಂದ ಕನಿಷ್ಠ ಏಳು ಗಂಭೀರ ರೋಗಿಗಳು ಮೃತಪಟ್ಟಿದ್ದಾರೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.