ಶ್ರೀನಗರ: ಮಣಿ ಶಂಕರ್ ಅಯ್ಯರ್ ಮುಂದಾಳತ್ವದ ಕಾಂಗ್ರೆಸ್ ಪಕ್ಷದ ನಿಯೋಗ ಗುರುವಾರ ಹಿರಿಯ ಪ್ರತ್ಯೇಕವಾದಿ ಮುಖಂಡ ಮೀರ್ವೇಜ್ ಉಮರ್ ಫಾರೂಕ್ ಅವರನ್ನು ಭೇಟಿ ಮಾಡಿದೆ.
ಈ ನಿಯೋಗದಲ್ಲಿ ಒ ಪಿ ಷಾ, ಸಂತೋಷ್ ಭಾರತಿ ಮತ್ತು ಏರ್ ವೈಸ್ ಮಾರ್ಷಲ್ ಕಪಿಲ್ ಕಾಕ್ (ನಿವೃತ್ತ) ಕೂಡ ಇದ್ದರು.
ಎರಡೂ ಬಣಗಳು ಕಾಶ್ಮೀರದ ಸದ್ಯದ ಪರಿಸ್ಥಿತಿಯ ಬಗ್ಗೆ ಚರ್ಚಿಸಿ, ಮಾತುಕತೆಗೆ ವಾತಾರವರಣ ಸೃಷ್ಟಿಸುವ ಬಗ್ಗೆ ಚರ್ಚೆ ಮಾಡಿತು ಎಂದು ಮೀರ್ವೇಜ್ ಮುಂದಾಳತ್ವದ ಹುರಿಯತ್ ಬಣದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಿಯೋಗ ತೀವ್ರವಾದಿ ಹುರಿಯತ್ ಬಣದ ನಾಯಕ ಸಯ್ಯದ್ ಅಲಿ ಗಿಲಾನಿ ಅವರನ್ನು ಕೂಡ ಭೇಟಿ ಮಾಡಲಿದೆ.
ಗುರುವಾರ ಸಂಜೆ ೪:೩೦ ಕ್ಕೆ ಈ ನಿಯೋಗವನ್ನು ಭೇಟಿ ಮಾಡಲು ಪ್ರತ್ಯೇಕವಾದಿ ಗಿಲಾನಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.