• Tag results for CM BSYediyurappa

ಸಚಿವ ಈಶ್ವರಪ್ಪ ಉಚ್ಚಾಟಿಸಿ, ಇಲ್ಲವೇ ಸಿಎಂ ರಾಜೀನಾಮೆ ಕೊಡಲಿ: ಡಿಕೆಶಿ ಪಟ್ಟು

ಸಚಿವ ಈಶ್ವರಪ್ಪ, ಮುಖ್ಯಮಂತ್ರಿ  ವಿರುದ್ಧವೇ ರಾಜ್ಯಪಾಲರು, ರಾಜ್ಯ ಬಿಜೆಪಿ ಉಸ್ತುವಾರಿಗೆ ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಇಂತಹ ಸಚಿವರನ್ನು ಕೂಡಲೇ ಸಚಿವ ಸ್ಥಾನದಿಂದ ಉಚ್ಛಾಟಿಸಿ, ಇಲ್ಲವಾದರೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದು  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ. 

published on : 3rd April 2021

ರಾಜ್ಯಪಾಲರಿಗೆ ದೂರು: ಈಶ್ವರಪ್ಪ‌ ವಿರುದ್ಧ ತಿರುಗಿ ಬಿದ್ದ ಸ್ವಪಕ್ಷೀಯರು, ಸಚಿವರು, ಶಾಸಕರ ತೀವ್ರ ಅಸಮಾಧಾನ

ತಾವು ನಿಭಾಯಿಸುತ್ತಿರುವ ಗ್ರಾಮೀಣಾಭಿವೃದ್ಧಿ ಖಾತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಸ್ತಕ್ಷೇಪ ಮಾಡುತ್ತಿದ್ದು ಅವರ ವಿರುದ್ಧ ಕ್ರಮ‌ಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರು ನೀಡಿದ ಸಚಿವ ಈಶ್ವರಪ್ಪ ವಿರುದ್ಧ ಸಚಿವ ಸಂಪುಟದ ಹಲವು ಸಚಿವರು, ಶಾಸಕರು ತಿರುಗಿ ಬಿದ್ದಿದ್ದಾರೆ.

published on : 1st April 2021

ರಾಜ್ಯಪಾಲರು ಮಧ್ಯಪ್ರವೇಶಿಸಿ ಮುಖ್ಯಮಂತ್ರಿಯನ್ನು ವಜಾಗೊಳಿಸಿ: ಸಿದ್ದರಾಮಯ್ಯ ಒತ್ತಾಯ

ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಿ ಮುಖ್ಯಮಂತ್ರಿಯನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 

published on : 1st April 2021

ಯಡಿಯೂರಪ್ಪ ಅವರೇ, ಗೋಮೂತ್ರ ಸಿಂಪಡಿಸಿದರೂ ನಿಮಗಂಟಿದ ಕಳಂಕ ಶುದ್ಧವಾಗುವುದಿಲ್ಲ: ಕಾಂಗ್ರೆಸ್

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕೊರಳಲ್ಲಿರುವ ಆರೋಪಗಳ ಸರಮಾಲೆಯನ್ನು ವಿವರಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಯಡಿಯೂರಪ್ಪ ಅವರೇ, ಗೋಮೂತ್ರ ಸಿಂಪಡಿಸಿದರೂ ನಿಮಗಂಟಿದ ಕಳಂಕ ಶುದ್ಧವಾಗುವುದಿಲ್ಲ ಎಂದು ಟೀಕಾ ಪ್ರಹಾರ ನಡೆಸಿದೆ.

published on : 1st April 2021

ಉಪ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಇಲ್ಲ- ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಉಪ ಚುನಾವಣೆಯಲ್ಲಿ ತಮ್ಮ ಪುತ್ರ ವಿಜಯೇಂದ್ರ ಸ್ಪರ್ಧಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

published on : 21st March 2021

ಕೋವಿಡ್ ನಿಯಂತ್ರಣ ಸಂಬಂಧ ಆರೋಗ್ಯ ತಜ್ಞರೊಂದಿಗೆ ಸಿಎಂ ಸಭೆ, ಮಾಸ್ಕ್ ಧರಿಸದಿದ್ದರೆ ದಂಡದ ಎಚ್ಚರಿಕೆ..

ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ  ಸಂಜೆ ವಿಧಾನಸೌಧದಲ್ಲಿ ಅಧಿಕಾರಿಗಳು ಹಾಗೂ ಆರೋಗ್ಯ ತಜ್ಞರೊಂದಿಗೆ ಸಭೆ ನಡೆಸಿ ಕೋವಿಡ್ ಕುರಿತು ರಾಜ್ಯದಲ್ಲಿನ ಪರಿಸ್ಥಿತಿ ಕುರಿತು ಅವಲೋಕನ ನಡೆಸಿದರು.

published on : 15th March 2021

ಮುಖ್ಯಮಂತ್ರಿ ಆದೇಶವಿಲ್ಲದೆ ವರ್ಗಾವಣೆ ಮಾಡುವಂತಿಲ್ಲ: ಸೂಚನೆ

ಯಾವುದೇ ಇಲಾಖೆಯಲ್ಲಿ ಆಡಳಿತಾತ್ಮಕ ಅವಶ್ಯವಿರುವ ಸ್ಥಾನಗಳನ್ನು ತುಂಬುವುದನ್ನು  ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆಗಳನ್ನು ಮಾಡಲು ಮುಖ್ಯಮಂತ್ರಿಗಳ ಅನುಮತಿ ಪಡೆಯುವುದು ಕಡ್ಡಾಯವೆಂದು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಸೂಚನೆ ನೀಡಿದ್ದಾರೆ.

published on : 5th March 2021

ಕಾವೇರಿ ಹೆಚ್ಚುವರಿ ನೀರನ್ನು ತಮಿಳುನಾಡಿನ ಯೋಜನೆಗಳಿಗೆ ಬಳಸಲು ಅವಕಾಶ ಕೊಡಬೇಡಿ: ಕೇಂದ್ರಕ್ಕೆ ಬಿಎಸ್ ವೈ ಒತ್ತಾಯ

ವೆಲ್ಲಾರು- ವೈಗೈ ಮತ್ತು ಗುಂಡಾರು ನದಿಗಳನ್ನು ಕಾವೇರಿಯೊಂದಿಗೆ ಜೋಡಿಸುವುದರೊಂದಿಗೆ  ಕಾವೇರಿ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ತಮಿಳುನಾಡಿಗೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಸರ್ಕಾರ ಶುಕ್ರವಾರ ಪುನರುಚ್ಚರಿಸಿದೆ.

published on : 26th February 2021

ಕರ್ತವ್ಯ ನಿರ್ವಹಣೆಯಲ್ಲಿ ಕರ್ನಾಟಕ ಪೊಲೀಸರು ದಕ್ಷತೆ, ಪ್ರಾಮಾಣಿಕತೆ ಸಾಬೀತು-ಯಡಿಯೂರಪ್ಪ

 ಕರ್ತವ್ಯ ನಿರ್ವಹಣೆಯಲ್ಲಿ ಕರ್ನಾಟಕ ಪೊಲೀಸರು ದಕ್ಷತೆ, ಪ್ರಾಮಾಣಿಕತೆ ಸಾಬೀತು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

published on : 8th February 2021

ಪಂಚಾಯತ್ ರಾಜ್ ವ್ಯವಸ್ಥೆ ಬಲವರ್ಧನೆಗೆ ಬದ್ಧ: ಬಿ.ಎಸ್. ಯಡಿಯೂರಪ್ಪ

ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

published on : 6th February 2021

ಆವಿಷ್ಕಾರ ವಿಭಾಗದಲ್ಲಿ ರಾಜ್ಯದ ಇಬ್ಬರು ಬಾಲಕರು ಸಾಧನೆ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಭಿನಂದನೆ

ಆವಿಷ್ಕಾರ ವಿಭಾಗದಲ್ಲಿ ಈ ಬಾರಿ ರಾಜ್ಯದ ಇಬ್ಬರು ಬಾಲಕರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾಗಿರುವ  ದಕ್ಷಿಣ ಕನ್ನಡದ 15 ವರ್ಷದ ಕೆ. ರಾಕೇಶ್ ಕೃಷ್ಣ ಹಾಗೂ ಬೆಂಗಳೂರಿನ 10 ವರ್ಷದ ವೀರ್ ಕಶ್ಯಪ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

published on : 25th January 2021

ನನ್ನ ಹಾಗೂ ಪಕ್ಷದ ತಂಟೆಗೆ ಬಂದರೆ ಹುಷಾರ್: ಮುಖ್ಯಮಂತ್ರಿ ಬಿಎಸ್ ವೈಗೆ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ!

ಜೆಡಿಎಸ್ ಪಕ್ಷದ ಸುದ್ದಿಗೆ ಬರಬೇಡಿ.ನನ್ನ ಸುದ್ದಿಗೆ ಬಂದರೆ ಸರಿ ಇರುವುದಿಲ್ಲ. ಹೇಗೋ ಸುಭದ್ರವಾಗಿದ್ದೀರಿ. ನಾನು ಕೈ ಹಾಕಿದರೆ ಸರಿ ಇರಲ್ಲ.ನನ್ನ ತಂಟೆಗೆ ಬಂದರೆ ಹುಷಾರ್.’ಹೀಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

published on : 19th January 2021

ಬ್ಲಾಕ್ ಮೇಲ್ ಸಿಡಿ: ಮುಖ್ಯಮಂತ್ರಿ ಯಡಿಯೂರಪ್ಪ ದೂರು ದಾಖಲಿಸಲಿ- ಸಿದ್ದರಾಮಯ್ಯ ಸವಾಲು

ಸಂಪುಟ ವಿಸ್ತರಣೆ ಬೆನ್ನೆಲ್ಲೆ ರಹಸ್ಯ ಸಿಡಿ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ವಿವಾದ ಸೃಷ್ಟಿಸಿರುವಂತೆಯೇ ಬ್ಲಾಕ್ ಮೇಲ್ ಮಾಡುತ್ತಿರುವವರ ವಿರುದ್ಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೂರು ದಾಖಲಿಸಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

published on : 14th January 2021

ಶೀಘ್ರದಲ್ಲೇ ಶುಭ ಸುದ್ದಿ: ಕೇಂದ್ರ ನಾಯಕರ ಜೊತೆಗಿನ ಸಭೆ ತೃಪ್ತಿ, ಸಮಾಧಾನ ತಂದಿದೆ- ದೆಹಲಿಯಲ್ಲಿ ಬಿಎಸ್ ವೈ!

ಮಂತ್ರಿ ಮಂಡಲ ವಿಸ್ತರಣೆ ಕುರಿತಂತೆ ಕೇಂದ್ರದ ವರಿಷ್ಠರ ಜೊತೆಗೆ ಇಂದು ನಡೆದ ಸಭೆಯಲ್ಲಿ ಚರ್ಚೆ ನಡೆದಿದ್ದು, ಶೀಘ್ರದಲ್ಲೇ ಶುಭ ಸುದ್ದಿ ಸಿಗಲಿದೆ. ಕೇಂದ್ರ ನಾಯಕರ ಜೊತೆಗಿನ ಸಭೆ, ತಮಗೆ ತೃಪ್ತಿ , ಸಮಾಧಾನ ತಂದಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

published on : 10th January 2021

ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ ಸ್ಥಾಪನೆ ಮೂಲಕ 1 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿ: ಮುಖ್ಯಮಂತ್ರಿ

ಏಕಸ್ ಟಾಯ್ ಕ್ಲಸ್ಟರ್ ಕರ್ನಾಟಕ ಸರ್ಕಾರದ ‘ನಿರ್ದಿಷ್ಟ ಉತ್ಪನ್ನ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ ಯೋಜನೆಯ ಒಂದು ಪ್ರಮುಖ ಭಾಗವಾಗಿದ್ದು, ಆಟಿಕೆ ಕ್ಲಸ್ಟರ್  ಸ್ಥಾಪನೆ ಮಾಡುವ ಮೂಲಕ ನಾವು 1 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುತ್ತಿದ್ದೇವೆ  ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

published on : 9th January 2021
1 2 3 >