- Tag results for berth
![]() | ಅಮಿತ್ ಶಾ ಖಡಕ್ ಎಚ್ಚರಿಕೆಗೂ ಬಗ್ಗದ ಅತೃಪ್ತ ಬಿಜೆಪಿ ನಾಯಕರು: ದೆಹಲಿಗೆ ಭೇಟಿ ನೀಡಿ ವರಿಷ್ಠರಿಗೆ ದೂರುಸಚಿವ ಸಂಪುಟ ವಿಸ್ತರಣೆ ಬಳಿಕ, ಅತೃಪ್ತ ಶಾಸಕರಿಗೆ ಬಿಜೆಪಿ ನಾಯಕ, ಕೇಂದ್ರ ಸಚಿವ ಅಮಿತ್ ಶಾ ನೀಡಿದ ಖಡಕ್ ಎಚ್ಚರಿಕೆಗೂ ಬಗ್ಗದ ಕೆಲ ಶಾಸಕರು ದೆಹಲಿ ಯಾತ್ರೆ ಕೈಗೊಂಡು ವರಿಷ್ಠರನ್ನು ಭೇಟಿಮಾಡಿದ್ದು, ಭೇಟಿ ವೇಳೆ ತಮ್ಮ ಅತೃಪ್ತಿ, ಅಸಮಾಧಾನ ಹೊರಹಾಕಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. |
![]() | ಮಂತ್ರಿ ಸ್ಥಾನದ ಚರ್ಚೆ ಮುಗಿದ ಅಧ್ಯಾಯ: ಶಾಸಕ ಮುನಿರತ್ನಸಚಿವ ಸ್ಥಾನ ಸದ್ಯಕ್ಕೆ ಮುಗಿದ ಅಧ್ಯಾಯ. ಆ ಬಗ್ಗೆ ಈಗ ಚರ್ಚೆ ಬೇಡ. ಬಿಜೆಪಿ ವರಿಷ್ಠರು ಹಾಗೂ ಮುಖ್ಯಮಂತ್ರಿ ನನಗೆ ಸಚಿವ ಸ್ಥಾನ ನೀಡಲು ಬದ್ಧರಿದ್ದು, ಅದಕ್ಕೂ ಕಾಲ ಕೂಡಿ ಬರುತ್ತದೆ ಎಂದು ರಾಜ ರಾಜೇಶ್ವರಿ ನಗರದ ಶಾಸಕ ಮುನಿರತ್ನ ಅಭಿಪ್ರಾಯಪಟ್ಟಿದ್ದಾರೆ. |
![]() | ಕಮಲ ಪಾಳಯದಲ್ಲಿ ಎದ್ದ ಬಂಡಾಯದ ಕಾವು: ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡ 'ಬಂಡಾಯ' ಸಚಿವರು, ಕೇಂದ್ರ ನಾಯಕರ ಭೇಟಿಗೆ ನಿರ್ಧಾರಸಚಿವ ಸಂಪುಟ ವಿಸ್ತರಣೆ ವಿಳಂಬ, ಪುನಾರಚನೆಗೆ ವರಿಷ್ಟರಿಂದ ಸಿಗದ ಅನುಮತಿ, ನಾಯಕತ್ವ ಗೊಂದಲ, ನಿಗಮಮಂಡಳಿ ನೇಮಕಾತಿಯಲ್ಲಿ ಕಡೆಗಣನೆ ಸೇರಿದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಬಂಡಾಯ ಕಾವು ಏರತೊಡಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಮುನಿಸಿಕೊಂಡಿರುವ ಬಂಡಾಯ ಸಚಿವರು ಕೇಂದ್ರ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆಂದು... |
![]() | ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ: ನಳೀನ್ ಕುಮಾರ್ ಕಟೀಲ್ ಸ್ಪಷ್ಟನೆಇದೂವರೆಗೂ ಮುಖ್ಯಮಂತ್ರಿಗಳ ಬದಲಾವಣೆ ಕುರಿತು ಯಾವುದೇ ಚರ್ಚೆಗಳೂ ನಡೆದಿಲ್ಲ. ಯಾರೊಬ್ಬರು ನಾಯಕತ್ವ ಬದಲಾವಣೆ ಕುರಿತು ಪ್ರಶ್ನೆಯನ್ನೇ ಎತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಶನಿವಾರ ಹೇಳಿದ್ದಾರೆ. |
![]() | ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವವರೆಗೂ ಹೋರಾಟ ಮಾಡುತ್ತೇನೆ: ರಮೇಶ್ ಜಾರಕಿಹೊಳಿನನಗೆ ಸಿ.ಪಿ.ಯೋಗೇಶ್ವರ್ ತುಂಬಾ ಪರಿಚಯ ಹಾಗೂ ಆತ್ಮೀಯರು. ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ಹೋರಾಟ ಮಾಡುತ್ತೇನೆ. ಕೊನೆಯವರೆಗೂ ಅವರ ಪರ ಬ್ಯಾಟಿಂಗ್ ಮಾಡುತ್ತೇನೆ. |
![]() | ಸಂಪುಟ ಕಸರತ್ತು: ಸಚಿವ ಸ್ಥಾನದ ಮೇಲೆ ವಿಜಯಪುರದ 4 ಶಾಸಕರ ಕಣ್ಣುರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತುದಿಗಾಲಲ್ಲಿ ನಿಂತಿದ್ದು, ಈ ಬೆಳವಣಿಗೆ ನಡುವಲ್ಲೇ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ನಾಲ್ವರು ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ಆರಂಭಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. |