• Tag results for rajanath singh

ರಕ್ಷಣಾ ಸಚಿವರಿಂದ ಶಸ್ತ್ರಾಸ್ತ್ರಗಳ ಆಮದು ನಿರ್ಬಂಧದ ಮೂರನೇ ಪಟ್ಟಿ ಬಿಡುಗಡೆ: ಪಟ್ಟಿಯಲ್ಲಿ ಏನೆಲ್ಲಾ ಇದೆ? ಇಲ್ಲಿದೆ ವಿವರ...

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏ.07 ರಂದು ಶಸ್ತ್ರಾಸ್ತ್ರಗಳ ಆಮದು ನಿರ್ಬಂಧದ 3ನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಸೇನಾ ವ್ಯವಸ್ಥೆಗಳು ಹಾಗೂ ಶಸ್ತ್ರಾಸ್ತ್ರಗಳಿಗೆ ಸಂಬಂಧಪಟ್ಟ 101 ಸಾಮಗ್ರಿಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. 

published on : 7th April 2022

ಮುಂದಿನ CDS ಆಯ್ಕೆ ಪ್ರಕ್ರಿಯೆ ಆರಂಭ, ಸದ್ಯದಲ್ಲಿಯೇ ಹೆಸರು ಅಂತಿಮಗೊಳಿಸಿ ಘೋಷಣೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಭಾರತದ ರಕ್ಷಣಾ ಪಡೆ(CDS) ಮುಖ್ಯಸ್ಥರಾಗಿದ್ದ ಜ.ಬಿಪಿನ್ ರಾವತ್ ತಮಿಳು ನಾಡಿನ ಕೂನ್ನೂರು ಬಳಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹಠಾತ್ ಆಗಿ ನಿಧನ ಹೊಂದಿದ ನಂತರ ಅವರ ಉತ್ತರಾಧಿಕಾರಿ ಎಂಬ ಪ್ರಶ್ನೆ ಉದ್ಭವವಾಗಿದೆ. ಅವರ ಉತ್ತರಾಧಿಕಾರಿಯನ್ನು ನೇಮಿಸುವ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

published on : 17th December 2021

ಸೇನಾ ಹೆಲಿಕಾಪ್ಟರ್ ದುರಂತ; ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ಆರಂಭ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಮಿ-17 ವಿ-5(Mi-17 V-5 )ಭೀಕರ ದುರಂತಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆ ಕಲಾಪದ ಆರಂಭದಲ್ಲಿ ಹೇಳಿಕೆ ನೀಡಿದ್ದಾರೆ.

published on : 9th December 2021

ತನ್ನ ಅಗತ್ಯದ ಶೇ. 90ರಷ್ಟು ರಕ್ಷಣಾ ಉತ್ಪನ್ನಗಳನ್ನು ಭಾರತದಲ್ಲೇ ತಯಾರಿಸಲಿದೆ: ರಾಜನಾಥ್ ಸಿಂಗ್

ಅಗತ್ಯವಿರುವ ರಕ್ಷಣಾ ಉತ್ಪನ್ನಗಳ ಶೇಕಡಾ 90ರಷ್ಟನ್ನು ದೇಶವೇ ಉತ್ಪಾದನೆ ಮಾಡಲಿದ್ದು, 2024-25ರ ಹೊತ್ತಿಗೆ 5 ಬಿಲಿಯನ್ ಅಮೆರಿಕ ಡಾಲರ್ ಮೊತ್ತದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವಷ್ಟು ಸಮರ್ಥವಾಗಿ ಬೆಳೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

published on : 20th November 2021

"ಸಾವರ್ಕರ್ ಭಾರತದ ರಾಷ್ಟ್ರಪಿತ": ಬಿಜೆಪಿಯಿಂದ ಶೀಘ್ರವೇ ಇಂತಹ ಘೋಷಣೆಯಾಗಲಿದೆ ಎಂದ ಓವೈಸಿ

ಬಿಜೆಪಿ ಸಾವರ್ಕರ್ ಅವರನ್ನು ರಾಷ್ಟ್ರಪಿತ ಎಂದು ಘೋಷಿಸಲಿದೆ" ಎಂದು ಎಂಐಎಂ ಪಕ್ಷದ ಸ್ಥಾಪಕ ಓವೈಸಿ ಆರೋಪಿಸಿದ್ದಾರೆ.

published on : 13th October 2021

ಮಮತಾ ಬ್ಯಾನರ್ಜಿ,ಪಿಣರಾಯ್, ಸ್ಟಾಲಿನ್ ಗೆ ರಾಜನಾಥ್‍ ಸಿಂಗ್ ಅಭಿನಂದನೆ

ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಹಿನ್ನೆಲೆಯಲ್ಲಿ ಕ್ರಮವಾಗಿ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಎಲ್ ಡಿಎಫ್ ಮುಖಂಡ ಪಿಣರಾಯ್ ವಿಜಯನ್ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಅಭಿನಂದಿಸಿದ್ದಾರೆ.

published on : 2nd May 2021

ಭಾರತ-ಅಮೆರಿಕಾ ರಕ್ಷಣಾ ಪಾಲುದಾರಿಕೆ ಎತ್ತರಕ್ಕೆ ಬೆಳೆಸುವುದು ಬೈಡನ್ ಆಡಳಿತದ ಆದ್ಯತೆ: ಲಾಯ್ಡ್ ಆಸ್ಟಿನ್

ಜೋ ಬೈಡನ್ ನೇತೃತ್ವದಲ್ಲಿ ಅಮೆರಿಕದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಲ್ಲಿನ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಮೊದಲ ಬಾರಿಗೆ 3 ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ.

published on : 20th March 2021

ಬಾಲಕೋಟ್ ವಾಯುದಾಳಿಗೆ ಎರಡು ವರ್ಷ: ಗೃಹ ಸಚಿವ, ರಕ್ಷಣಾ ಸಚಿವರಿಂದ ಭಾರತೀಯ ವಾಯುಪಡೆಗೆ ಅಭಿನಂದನೆ 

ಬಾಲಕೋಟ್ ವಾಯುದಾಳಿಗೆ ಎರಡು ವರ್ಷ. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಅಸಾಧಾರಣ ಧೈರ್ಯ ಮತ್ತು ಶ್ರದ್ಧೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೊಂಡಾಡಿದ್ದಾರೆ.

published on : 26th February 2021

ಪೂರ್ವ ಲಡಾಕ್ ನ ಪಾಂಗೊಂಗ್ ಪ್ರದೇಶದಿಂದ ಸೇನಾಪಡೆ ಹಿಂತೆಗೆತಕ್ಕೆ ಭಾರತ-ಚೀನಾ ಒಪ್ಪಂದ: ರಾಜ್ಯಸಭೆಗೆ ರಕ್ಷಣಾ ಸಚಿವ ವಿವರಣೆ

ಭಾರತಕ್ಕೆ ಸೇರಿದ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ, ದೇಶದ ಭದ್ರತೆ ವಿಚಾರ ಬಂದಾಗ ನೆರೆ ದೇಶಗಳೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪುನರುಚ್ಛರಿಸಿದ್ದಾರೆ.

published on : 11th February 2021

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆ ಒದಗಿಸುವ ಪಾತ್ರವನ್ನು ಭಾರತ ನಿರ್ವಹಿಸಬಹುದು: ರಾಜನಾಥ್ ಸಿಂಗ್ 

ಹಿಂದೂ ಮಹಾಸಾಗರ ಪ್ರದೇಶದಲ್ಲಿ  ಭೌಗೋಳಿಕವಾಗಿ ರಾಜಕೀಯವಾಗಿ ವಿಶ್ವಾಸಾರ್ಹ ಪಾಲುದಾರನಾಗಿರುವುದರಿಂದ ಭಾರತವು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತಾ ಪೂರೈಕೆದಾರನ ಪಾತ್ರವನ್ನು ವಹಿಸಬಹುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

published on : 4th February 2021

'ಪ್ರಾದೇಶಿಕ ಸಮಗ್ರತೆ ರಕ್ಷಿಸಲು, ಯಾವುದೇ ದುಷ್ಕೃತ್ಯಗಳನ್ನು ಸೋಲಿಸಲು ಭಾರತ ಸಿದ್ಧವಿದೆ': ಚೀನಾಗೆ ರಾಜನಾಥ್ ಸಿಂಗ್ ಸಂದೇಶ

ಗಡಿಭಾಗದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಚೀನಾದ ಪ್ರಯತ್ನಗಳ ಹಿನ್ನೆಲೆಯಲ್ಲಿ ಭಾರತ ಜಾಗರೂಕವಾಗಿದೆ, ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಯಾವುದೇ ದುಷ್ಕೃತ್ಯಗಳನ್ನು ಸೋಲಿಸಲು ಸಹ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

published on : 3rd February 2021

'ಭಾರತೀಯ ಸೇನೆಯಲ್ಲಿ ಆತ್ಮ ನಿರ್ಭರಕ್ಕೆ ಒತ್ತು, 101 ರಕ್ಷಣಾ ಸಾಮಗ್ರಿಗಳ ಆಮದು ಮೇಲೆ ನಿರ್ಬಂಧ': ರಕ್ಷಣಾ ಸಚಿವ ರಾಜನಾಥ್ ಸಿಂಗ್ 

ರಕ್ಷಣಾ ಸಚಿವಾಲಯ ಆತ್ಮನಿರ್ಭರ ಯೋಜನೆಗೆ ಉತ್ತೇಜನ ನೀಡಲು ಸಿದ್ಧವಾಗಿದ್ದು, ದೇಶೀಯ ಕಂಪನಿಗಳ ಜತೆ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ವಿದೇಶಗಳಿಂದ 101  ರಕ್ಷಣಾ ಸಾಮಗ್ರಿಗಳ ಆಮದಿನ ಮೇಲೆ ನಿಷೇಧ ಹೇರಲಾಗಿದೆ.

published on : 9th August 2020

ರಾಶಿ ಭವಿಷ್ಯ