social_icon
  • Tag results for schools

'ಕಠಿಣ ಶ್ರಮ -ಕಲಿಕೆಯ ಮೇಲೆ ಆಸಕ್ತಿಯಿದ್ದರೆ ಸಾಮಾನ್ಯ ಬಾಲಕ ರಾಜ್ಯದ ಸಿಎಂ ಆಗಬಹುದು ಎನ್ನುವುದಕ್ಕೆ ನಾನೇ ಸಾಕ್ಷಿ'

ಬೇಸಿಗೆ ರಜೆ ಕಳೆದು ನಿನ್ನೆಯಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ರಾಜ್ಯಾದ್ಯಂತ ಶಾಲೆಗಳು ಪ್ರಾರಂಭವಾಗಿವೆ, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲೆಯ ಮಕ್ಕಳಿಗೆ ಪತ್ರ ಬರೆದಿದ್ದು, ಶಾಲೆಗೆ ಬರುವಂತೆ ಸ್ವಾಗತ ಬಯಸಿ ಶುಭಾಶಯ ಕೋರಿದ್ದಾರೆ.

published on : 31st May 2023

ಪಂಚಾಯಿತಿ ಮಟ್ಟದಲ್ಲಿ ನವೋದಯ ಮಾದರಿ ಉನ್ನತ ಗುಣಮಟ್ಟದ ಶಾಲೆ ಆರಂಭ: ಡಿಕೆ.ಶಿವಕುಮಾರ್

ರಾಜ್ಯದ ಪ್ರತಿ ಪಂಚಾಯತಿ ಮಟ್ಟದಲ್ಲಿಯೂ ನವೋದಯ ಮಾದರಿ ಉನ್ನತ ಗುಣಮಟ್ಟದ ಶಾಲೆಯ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಹೇಳಿದರು.

published on : 30th May 2023

ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ನಾಲ್ಕು ಶಾಲೆಗಳಲ್ಲಿ 148 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್

ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ನಾಲ್ಕು ಬಾಲಕಿಯರ ವಸತಿ ಶಾಲೆಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ 148 ವಿದ್ಯಾರ್ಥಿಗಳಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ ಎಂದು ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

published on : 26th April 2023

ಮಾನ್ಯತೆಯ ಸಮಸ್ಯೆಯನ್ನು ಮೇ 31 ರ ವೇಳೆಗೆ ಬಗೆಹರಿಸಿಕೊಳ್ಳಿ ಇಲ್ಲವೇ ಬಂದ್ ಮಾಡಿ; ಅನಧಿಕೃತ ಶಾಲೆಗಳಿಗೆ ಸೂಚನೆ

ಮಾನ್ಯತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಅನಧಿಕೃತ ಖಾಸಗಿ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಮೇ.31 ರ ವರೆಗೆ ಗಡುವು ನೀಡಿದೆ. 

published on : 20th April 2023

ಖಾಸಗಿ ಶಾಲೆಗಳ ಶುಲ್ಕದ ವಿವರ ಕಡ್ಡಾಯ; ಕರ್ನಾಟಕ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ

ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಮಹತ್ವದ ಆದೇಶ ನೀಡಿದ್ದು, ಖಾಸಗಿ ಶಾಲೆಗಳ ಶುಲ್ಕದ ವಿವರ ಕಡ್ಡಾಯಗೊಳಿಸಿದೆ.

published on : 18th April 2023

ಮುಂದಿನ ವಾರಗಳಲ್ಲಿ ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ; ಶೀಘ್ರದಲ್ಲೇ ಶಾಲೆಗಳಿಗೆ ಮಾರ್ಗಸೂಚಿ: ಶಿಕ್ಷಣ ಸಚಿವೆ ಅತಿಶಿ

ಕೋವಿಡ್-19 ಪ್ರಕರಣಗಳ ತೀವ್ರತೆಯ ಮಧ್ಯೆ, ಸರ್ಕಾರವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಮತ್ತು ಶೀಘ್ರದಲ್ಲೇ ಶಾಲೆಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ದೆಹಲಿ ಶಿಕ್ಷಣ ಸಚಿವೆ ಅತಿಶಿ ಗುರುವಾರ ಹೇಳಿದ್ದಾರೆ.

published on : 13th April 2023

ಉತ್ತರ ಪ್ರದೇಶದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಐಐಟಿ ಮದ್ರಾಸ್ ಅಧ್ಯಾಪಕರಿಂದ ವಿಶೇಷ ತರಗತಿ!

ಉತ್ತರ ಪ್ರದೇಶದ ಮೂಲ ಶಿಕ್ಷಣ ಇಲಾಖೆಯು ಐಐಟಿ ಮದ್ರಾಸ್‌ನೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಇದರಡಿ ಅದರ ಅಧ್ಯಾಪಕರು ವಾರಣಾಸಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿಶೇಷ ಆನ್‌ಲೈನ್ ತರಗತಿ ನಡೆಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ವಿದ್ಯಾ ಶಕ್ತಿ ಪ್ರಾಜೆಕ್ಟ್ ಅಡಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

published on : 31st March 2023

ಕರ್ನಾಟಕ ಚುನಾವಣೆ 2023: ಶೂನ್ಯ ಭ್ರಷ್ಟಾಚಾರ, ಉಚಿತ ವಿದ್ಯುತ್ ಸೇರಿ 12 ಭರವಸೆಗಳ ನೀಡಿದ ಎಎಪಿ

ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಲು ಪ್ರಯತ್ನ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ (ಎಎಪಿ), ಅಧಿಕಾರಕ್ಕೆ ಬಂದಿದ್ದೇ ಆದರೆ, ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರವನ್ನು ಖಾತರಿಪಡಿಸುವುದಾಗಿ ಮತ್ತು ರಾಜ್ಯದಲ್ಲಿ ಶೂನ್ಯ ಭ್ರಷ್ಟಾಚಾರವನ್ನು ಖಚಿತಪಡಿಸುವುದಾಗಿ ಘೋಷಣೆ ಮಾಡಿದೆ.

published on : 30th March 2023

ನಿಯಮ ಉಲ್ಲಂಘನೆಯನ್ನು ಸರಿಪಡಿಸಿಕೊಳ್ಳಲು ರಾಜ್ಯದ ಅನಧಿಕೃತ ಶಾಲೆಗಳಿಗೆ ಕಾಲಾವಕಾಶ: ಶಿಕ್ಷಣ ಇಲಾಖೆ

ರಾಜ್ಯದಲ್ಲಿನ ಅನಧಿಕೃತ ಶಾಲೆಗಳಿಗೆ ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ನಿಯಮಗಳ ಉಲ್ಲಂಘನೆಯನ್ನು ಸರಿಪಡಿಸಲು ಕಾಲಾವಕಾಶ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

published on : 28th March 2023

ಎಚ್‌3ಎನ್‌2 ವೈರಸ್ ಸೋಂಕು ಭೀತಿ: ಮಾರ್ಚ್ 16 ರಿಂದ 26ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೇರಿ ಸರ್ಕಾರ

ಜ್ವರ, ಶೀತ ಮತ್ತು ಮೈಕೈ ನೋವುಗಳಂತಹ ರೋಗಲಕ್ಷಣಗಳನ್ನು ಹೊಂದಿರುವ ಎಚ್‌3ಎನ್‌2 ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಪುದುಚೇರಿ ಸರ್ಕಾರವು ಮಾರ್ಚ್ 16 ರಿಂದ ಮಾರ್ಚ್ 26 ರವರೆಗೆ 8ನೇ ತರಗತಿಯವರೆಗಿನ ಎಲ್ಲಾ ಶಾಲೆಗಳಿಗೆ ಬುಧವಾರ ರಜೆ ಘೋಷಿಸಿದೆ.

published on : 15th March 2023

ಆಗಸ್ಟ್ 15ರೊಳಗೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ: ಸಿಎಂ ಬೊಮ್ಮಾಯಿ

ಆಗಸ್ಟ್.15ರೊಳಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಹೇಳಿದರು.

published on : 15th March 2023

ಹಿಜಾಬ್ ಧರಿಸಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಅವಕಾಶ ಇಲ್ಲ; ಹೊಸ ಶಾಲೆಗಳ ಆರಂಭಕ್ಕೆ ಎನ್ ಒಸಿಗೆ ಸಚಿವರ ಬಳಿ ಬರಬೇಕಿಲ್ಲ: ಬಿ ಸಿ ನಾಗೇಶ್

ಕರ್ನಾಟಕದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ತರಗತಿಯೊಳಗೆ ಹಿಜಾಬ್ (Hijab) ಧರಿಸುವುದಕ್ಕೆ ನಿಷೇಧ ಹೇರಿರುವ ರಾಜ್ಯ ಸರ್ಕಾರದ ಆದೇಶದ ವಿರುದ್ಧ ವಿದ್ಯಾರ್ಥಿನಿಯರ ಸಮೂಹ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ಬರುವ ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದ್ದರು. 

published on : 3rd March 2023

ದೇಶದ 10 ಲಕ್ಷ ಸರ್ಕಾರಿ ಶಾಲೆಗಳಲ್ಲಿ ಶೇ.20 ರಲ್ಲಿ ಮಾತ್ರ ಇಂಟರ್ನೆಟ್ ಸೌಲಭ್ಯ: ಲೋಕಸಭೆಗೆ ಸರ್ಕಾರ ಮಾಹಿತಿ

ಭಾರತದಲ್ಲಿ 10 ಲಕ್ಷಕ್ಕೂ ಹೆಚ್ಚು ಸರಕಾರಿ ಶಾಲೆಗಳಿವೆ, ಆದರೆ ಕೇವಲ 2 ಲಕ್ಷ ಶಾಲೆಗಳಲ್ಲಿ ಮಾತ್ರ ಇಂಟರ್‌ನೆಟ್ ಸೌಲಭ್ಯವಿದೆ ಎಂದು ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರಕಾರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

published on : 14th February 2023

ಬಜೆಟ್'ನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಮೀಸಲಿಡಿ: ಪ್ರೊ.ದೊರೆಸ್ವಾಮಿ

ಮುಂಬರುವ ರಾಜ್ಯ ಬಜೆಟ್‌ನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಪ್ರತ್ಯೇಕ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಡಾ.ಎಂ.ಆರ್.ದೊರೆಸ್ವಾಮಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

published on : 8th February 2023

ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಬೀರಲು ಎನ್ಇಪಿಗೆ ಆದ್ಯತೆ ನೀಡಲಾಗಿದೆ: ಕೇಂದ್ರದ ಬಜೆಟ್ ಟೀಕಿಸಿದ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ

ಕೇಂದ್ರ ಬಜೆಟ್'ನಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಬದಲು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ ಎಂದು ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ (ಬಿಎಸ್‌ಎಸ್) ಟೀಕಿಸಿದೆ.

published on : 3rd February 2023
1 2 3 4 5 6 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9