ಪಟ್ಟದಕಲ್ಲಿನ ಶಿಲ್ಪವೈಭವ

ಇತಿಹಾಸದ ಪರಂಪರೆಯಲ್ಲಿ ಶತಮಾನಗಳಿಗೂ ದೀರ್ಘಕಾಲ ಕರ್ನಾಟಕದ ಬಹು ಭಾಗವನ್ನು...
ಪಟ್ಟದಕಲ್ಲು
ಪಟ್ಟದಕಲ್ಲು
Updated on

ಇತಿಹಾಸದ ಪರಂಪರೆಯಲ್ಲಿ ಶತಮಾನಗಳಿಗೂ ದೀರ್ಘಕಾಲ ಕರ್ನಾಟಕದ ಬಹು ಭಾಗವನ್ನು ತಮ್ಮ ಆಳ್ವಿಕೆಗೊಳಪಡಿಸಿಕೊಂಡು ಸುಭದ್ರ ಆಡಳಿತ ನೀಡಿದ ಚಾಲುಕ್ಯರು ಕಲೆ ಮತ್ತು ವಾಸ್ತು ಶಿಲ್ಪದಲ್ಲಿ ಒಂದು ಹೊಸ ಅಧ್ಯಾಯವನ್ನೇ ಸೃಷ್ಟಿಸಿದರು.

ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನ ಶಿಲ್ಪಕಲಾ ದೇವಾಲಯಗಳು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿವೆ. ಪೌರಾಣಿಕ ನಂಬಿಕೆಯ ಪ್ರಕಾರ ಪಟ್ಟದಕಲ್ಲು ಶೈವ ಆರಾಧನೆಯ ಪುಣ್ಯಕ್ಷೇತ್ರ, 'ಸಿಂಗರಾಜನ ಪುರಾಣ' ಮತ್ತು 'ಹಮ್ಮೀರ' ಕಾವ್ಯಗಳಲ್ಲಿ ಪಟ್ಟದಕಲ್ಲಿನ ಪ್ರಸಿದ್ಧ ಮನೆತನಗಳಾದ ನಂದ, ಮೌರ್ಯ, ಕದಂಬ ಹಾಗೂ ಚಾಲುಕ್ಯ ರಾಜರನ್ನು ಪಟ್ಟಾಭಿಷೇಕ ಮಾಡಿದ್ದರಿಂದ 'ಪಟ್ಟದಕಲ್ಲು' ಹೆಸರು ಬಂತೆಂಬ ಉಲ್ಲೇಖವಿದೆ. ಶಾಸನಗಳಲ್ಲಿ 'ಕಿಸುವೊಳಲ್‌' ಎಂದೂ ಇದೆ. ಸಾತ್ಯಕವಾಗಿ ಹೀಗೆಂದರೆ 'ಕೆಂಪುಪಟ್ಟಣ' ಎಂದರ್ಥ.

ಎರಡನೆಯ ವಿಕ್ರಮಾದಿತ್ಯ ರಾಂಚಿಯ ಮೇಲೆ ಮೂರು ಬಾರಿ ದಾಳಿ ಮಾಡಿ ಪಲ್ಲವರ ಮೇಲೆ ಗಳಿಸಿದ ವಿಜಯದ ಸಾಂಕೇತವಾಗಿ ನಿರ್ಮಾಣಗೊಂಡ ದ್ರಾವಿಡ ಶೈಲಿಯ ವಿರೂಪಾಕ್ಷ ದೇವಾಲಯ ಪ್ರಗತಿ ಮಾರ್ಗದ ಕಲಾ ನೈಪುಣ್ಯತೆಗೆ ಉತ್ತಮ ನಿದರ್ಶನ.

ಈ ದೇವಾಲಯದ ಪ್ರತ್ಯೇಕ ಮಂಟಪವೊಂದರಲ್ಲಿ ಎಂಟು ಅಡಿ ಎತ್ತರದ ಆಕರ್ಷಕ ಏಕಶಿಲಾ ನಂದಿ ಈಗಲೂ ಪೂಜಿಸಲ್ಪಡುತ್ತಿದೆ. ಮತ್ತೊಂದು ಪ್ರಮುಖ ಮಲ್ಲಿಕಾಜರ್ನನ ದೇವಾಲಯದ ವಿನ್ಯಾಸ ಗಾತ್ರದಲ್ಲಿ ಸಣ್ಣದಿದೆ.

ಒಳಭಾಗದ ನವರಂಗದಲ್ಲಿ ಕಂಬಗಳ ಮೇಲೆಲ್ಲ ರಾಮಾಯಣ, ಮಹಾಭಾರತ, ಅಂದಿನ ಕಾಲದ ಸಾಮಾಜಿಕ ಸ್ಥಿತಿ ಚಿತ್ರಿತ ಶಿಲ್ಪಗಳಿವೆ.

ಗಳಗನಾಥ ದೇವಾಲಯಗಳು ಅತ್ಯಂತ ಪ್ರಾಚೀನ ಮತ್ತು ಸುಂದರ ದೇವಾಲಯಗಳು. ದೇವಾಲಯಗಳಲ್ಲಿನ ಮತ್ತೊಂದು ವಿಶೇಷತೆ ಎಂದರೆ ಕಲಾತ್ಮಕ ಕಿಟಕಿಗಳು. ಕಟ್ಟಡದ ಹೊರಗೋಡೆಗಳಲ್ಲಿನ ಉಬ್ಬುಶಿಲ್ಪಗಳಂತೆ ಪ್ರತಿಯೊಂದು ಕಿಟಕಿಗಳಲ್ಲೂ ಶಿಲ್ಪಿಗಳ ಕೈಚಳಕದ ವಿಶಿಷ್ಟತೆ ಗೋಚರವಾಗುತ್ತದೆ. ಅಶೋಕ ಚಕ್ರದಂತಹ ಅಡ್ಡಗೆರೆಯ, ಒಂದಕ್ಕೊಂದು ಥಳಕು ಹಾಕಿಕೊಂಡ ವೃತ್ತಗಳ. ಸಮಾನಾಂತರ ರೇಖೆಯ ಕಿಟಕಿಗಳು ಭಿನ್ನತೆಯ ಪ್ರಮಾಣಬದ್ಧ ಅಳತೆಯಲ್ಲಿವೆ.

ಗಾಳಿ ಬೆಳಕಿನ ಮತ್ತು ಸಂಭಾಂಗಣದಲ್ಲಿಯ ಚಟುವಟಿಕೆಗಳು ಹೊರಗೆ ಕಾಣದಂಥ ವ್ಯವಸ್ಥೆಗೆ ರೂಪಿತಗೊಂಮಡ ಈ ಕಲಾತ್ಮಕ ಕಿಟಕಿಗಳು ಇಂದಿಗೂ ಒಂದೂ ಮುಕ್ಕಾಗದೆ ಭದ್ರವಾಗಿವೆ. ಪಟ್ಟದಕಲ್ಲಿನಲ್ಲಿ ಎಲ್ಲ ದೇವಾಲಯಗಳು ಒತ್ತಟ್ಟಿಗೇ ಇರುವುದರಿಂದ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ಸ್ವಲ್ಪವೂ ಬೇಜಾರೆನಿಸುವುದಿಲ್ಲ

ಎ.ಎಸ್.ಹೊಲಗೇರಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com