ತಾಜ್ ಮಹಲ್
ತಾಜ್ ಮಹಲ್

ತಾಜ್ ಮಹಲ್ ನೋಡಲು ಇನ್ನು ಮುಂದೆ ಹೆಚ್ಚಿನ ಶುಲ್ಕ

ಭಾರತೀಯ ಮತ್ತು ವಿದೇಶಿ ಪ್ರವಾಸಿಗರಿಬ್ಬರಿಗೂ ತಾಜ್ ಮಹಲ್ ನ ಪ್ರವೇಶ ಶುಲ್ಕ ..
Published on

ಆಗ್ರಾ: ಭಾರತೀಯ ಮತ್ತು ವಿದೇಶಿ ಪ್ರವಾಸಿಗರಿಬ್ಬರಿಗೂ ತಾಜ್ ಮಹಲ್ ನ ಪ್ರವೇಶ ಶುಲ್ಕ ಏರಿಸುವ ಪ್ರಸ್ತಾವನೆಗೆ ಆಗ್ರಾ ಅಭಿವೃದ್ಧಿ ಪ್ರಾಧಿಕಾರ (ಎ ಡಿ ಎ) ಒಪ್ಪಿಗೆ ನೀಡಿದೆ.

ನೆನ್ನೆ ನಡೆದ ಸಭೆಯಲ್ಲಿ, ೧೫ ವರ್ಷದ ಮೇಲ್ಪಟ್ಟ ಭಾರತೀಯ ನಾಗರಿಕರಿಗೆ ಸದ್ಯದ ೨೦ ರೂ ಪ್ರವೇಶ ಶುಲ್ಕದಿಂದ ೫೦ ರುಪಾಯಿಗೆ ಏರಿಸಲಾಗಿದೆ. ಈ ಮೊತ್ತದಲ್ಲಿ ೪೦ ರುಪಾಯಿ, ಎ ಡಿ ಎ ಗೆ ರಸ್ತೆ ತೆರಿಗೆ ರೂಪದಲ್ಲಿ ಸಂದಾಯವಾಗುತ್ತದೆ ಮತ್ತು ಇನ್ನುಳಿದ ೧೦ ರೂ ಭಾರತೀಯ ಪುರಾತತ್ವಶಾಸ್ತ್ರ ಇಲಾಖೆಗೆ (ಎ ಎಸ್ ಐ) ಸಂದಾಯವಾಗಲಿದೆ. ಸದ್ಯದ ೨೦ ರೂ ಶುಲ್ಕ ಎ ಡಿ ಎ ಮತ್ತಿ ಎ ಎಸ್ ಐ ನಡುವೆ ಸಮವಾಗಿ ಹಂಚಿಕೆಯಾಗುತ್ತಿತ್ತು.

ಸಾರ್ಕ್ ದೇಶದ ಪ್ರವಾಸಿಗರಿಗೆ ಪ್ರವೇಶಶುಲ್ಕವನ್ನು ೧೦ ರೂ ಇಳಿಸಿದ್ದು ಹೊಸ ಶುಲ್ಕ ೫೧೦/- ಇದೆ. ಇದರಲ್ಲಿ ಎ ಡಿ ಎ ಪಾಲು ೫೦೦ ರೂ ಮತ್ತು ಎ ಎಸ್ ಐ ಪಾಲು ೧೦ ರೂ.

ವಿದೇಶಿ ಪ್ರವಾಸಿಗರ ಶುಲ್ಕ ೭೫೦ ರೂ ನಿಂದ ೧೦೦೦ ರುಪಾಯಿಗೆ ಏರಿಕೆಯಾಗಿದೆ. ಇದರಲ್ಲಿ ಎ ಡಿ ಎ ಪಾಲು 750 ರೂ ಮತ್ತು ಎ ಎಸ್ ಐ ಪಾಲು 250 ರೂ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com