
ಜಪಾನ್ ಮೂಲದ ಹೋಂಡ ಕಾರು ತಯಾರಿಕಾ ಸಂಸ್ಥೆ ಇತ್ತೀಚೆಗಷ್ಟೇ ಪರಿಚಯಿಸಿದ್ದ ಪ್ರೀಮಿಯಂ ಹ್ಯಾಚ್ ಬ್ಯಾಕ್ ಹೋಂಡ ಜಾಝ್ ಕಾರ್ ಗೆ ಮಾರುಕಟ್ಟೆಯಲ್ಲಿ ಜನಪ್ರಿಯಗೊಂಡಿದ್ದು ಹೋಂಡಾ ಸಿಟಿ ಗಿಂತಲೂ ಹೆಚ್ಚು ಮಾರಾಟವಾಗಿದೆ.
ಉತ್ತಮವಾಗಿ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಜಾಝ್ ಸ್ಥಾನ ಪಡೆದಿದ್ದು, ಬದಲಾವಣೆಗೊಂಡ ಜಾಝ್ ಕಾರ್ ಆವೃತ್ತಿ ಮೊದಲ ಆವೃತ್ತಿಗಿಂತಲೂ ಹೆಚ್ಚು ಜನಪ್ರಿಯತೆ ಗಳಿಸಿದ್ದು, ಕಂಪನಿಗೆ ಉತ್ತಮ ಲಾಭ ತಂದುಕೊಟ್ಟಿದೆ. ಜಾಝ್ ಕಾರು ತನ್ನದೇ ವಿಭಾಗದ ವೋಕ್ಸ್ ವ್ಯಾಗನ್ ನ ಪೋಲೋ, ಮತ್ತು ಹುಂಡೈ ನ ಎಲೈಟ್ ಐ 20 ಕಾರುಗಳಿಗೆ ಪೈಪೋಟಿ ನೀಡುತ್ತಿದೆ.
ಮಾರುಕಟ್ಟೆಗೆ ಬಿಡುಗಡೆಯಾದ ಮೊದಲ ತಿಂಗಳೇ ಜಾಝ್ ಕಾರು ಉತ್ತಮ ಮಾರಾಟ ಕಂಡಿತ್ತು. ಭಾರತದಲ್ಲಿ ಈ ವರೆಗೂ 6.676 ಯೂನಿಟ್ ಮಾರಾಟಗೊಂಡಿದ್ದು ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದ ಬೆಸ್ಟ್ ಕಾರ್ ಎಂಬ ಖ್ಯಾತಿ ಪಡೆಯುವ ಎಲ್ಲಾ ಲಕ್ಷಣಗಳಿವೆ. ಜಾಝ್ ಕಾರ್ ನಿರೀಕ್ಷೆಗೂ ಮೀರಿ ಮಾರಾಟಗೊಳ್ಳುತ್ತಿರುವುದರ ಬಗ್ಗೆ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಉಪಾಧ್ಯಕ್ಷ ಜ್ಞಾನೇಶ್ವರ್ ಸೇನ್ ಸಂತಸ ವ್ಯಕ್ತಪಡಿಸಿದ್ದು ಈ ವಿಭಾಗದಲ್ಲಿ ಮತ್ತಷ್ಟು ಉತ್ತಮ ಕಾರ್ ಗಳನ್ನು ಹೊರತರಲಾಗುವುದು ಎಂದು ಹೇಳಿದ್ದಾರೆ.
Advertisement